Kannada Duniya

ವಿಭಿನ್ನ ಲುಕ್ ಗಾಗಿ ಈ ದುಪ್ಪಟ್ಟಗಳನ್ನು ಬಳಸಿ….!

ಹೆಚ್ಚಿನವರು ಸರಳವಾದ ಉಡುಗೆಗಳ ಮೇಲೆ ದುಪ್ಪಟ್ಟಗಳನ್ನು ಧರಿಸುತ್ತಾರೆ. ಇದು ಈಗೀನ ಫ್ಯಾಶನ್ ಆಗಿದೆ. ಮಾರುಕಟ್ಟೆಯಲ್ಲಿ ಹಲವು ಬಗೆಯ ದುಪ್ಪಟ್ಟಗಳು ಕಂಡುಬರುತ್ತದೆ. ಹಾಗಾಗಿ ಸರಳವಾದ ಉಡುಗೆಗಳಿಗೆ ನೀವು ಯಾವ ದುಪ್ಪಟ್ಟವನ್ನು ಧರಿಸಬೇಕು ಎಂಬುದನ್ನು ತಿಳಿಯಿರಿ.

ಕಲಂಕರಿ ದುಪ್ಪಟ್ಟಗಳು : ಕಲಂಕರಿ ದುಪ್ಪಟ್ಟ ಕೈಯಿಂದ ಚಿತ್ರಿಸಿದ ಅಥವಾ ಬ್ಲ್ಯಾಕ್ ಪ್ರಿಂಟ್ ಆಗಿದೆ. ಇದನ್ನು ಹತ್ತಿಯಿಂದ ತಯಾರಿಸಲಾಗುತ್ತದೆ. ಇದನ್ನು ಡೆನಿಮ್ ಮತ್ತು ಸರಳ ಕಮೀಜ್, ಟೀ ಶರ್ಟ್ ಅಥವಾ ಕುರ್ತಿಯೊಂದಿಗೆ ಧರಿಸಬಹುದು.

ಬನಾರಸಿ ರೇಷ್ಮೆ ದುಪ್ಪಟ್ಟ : ಇದನ್ನು ವಿಶೇಷವಾದ ದಿನಗಳಂದು ಧರಿಸಬಹುದು. ಇದು ತುಂಬಾ ಭಾರವಾಗಿರುತ್ತದೆ. ಇದನ್ನು ಡೆನಿಮ್ ಗಳು ಮತ್ತು ಖಾದಿ ಟ್ಯೂನಿಕ್ ಗಳೊಂದಿಗೆ ಧರಿಸಿದರೆ ಸಾಂಪ್ರದಾಯಿಕ ಲುಕ್ ನೀಡುತ್ತದೆ.

ಮಧುಬನಿ ದುಪ್ಪಟ್ಟಾ : ಸಾಮಾನ್ಯ ಜನರ ಜೀವನ ಶೈಲಿ ಮತ್ತು ಘಟನೆಗಳನ್ನು ದುಪ್ಪಟ್ಟದಲ್ಲಿ ಚಿತ್ರೀಸಲಾಗುತ್ತದೆ. ಈ ದುಪ್ಪಟ್ಟಾ ಭಾರತೀಯ ಮಹಿಳೆಯರಿಗೆ ಮಾತ್ರವಲ್ಲದೇ ಪ್ರಪಂಚದಾದ್ಯಂತ ಅನೇಕ ಮಹಿಳೆಯರು ಇದನ್ನು ಇಷ್ಟಪಡುತ್ತಾರೆ. ಇದನ್ನು ಹಬ್ಬ ಹರಿದಿನಗಳಲ್ಲಿ ಕುರ್ತಾದೊಂದಿಗೆ ಧರಿಸಬಹುದು.

ಇಕತ್ ದುಪ್ಪಟ್ಟಾ : ಇದನ್ನು ಬಣ್ಣ ಮತ್ತು ಎಳೆಗಳ ಮೇಲೆ ನೇಯಲಾಗುತ್ತದೆ. ಅದರ ಮಾದರಿಗಳನ್ನು ಪ್ರತ್ಯೇಕ ಎಳೆಗಳನ್ನು ಕಟ್ಟುವ ಮೂಲಕ ತಯಾರಿಸಲಾಗುತ್ತದೆ. ನಂತರ ಅವುಗಳನ್ನು ಹೊಸ ಮಾದರಿಯಲ್ಲಿ ಮಾಡಲು ತಿರುಚಿ ಬಣ್ಣ ಹಾಕಲಾಗುತ್ತದೆ.

ಪ್ರಯಾಣಿಸುವಾಗ ಮಹಿಳೆಯರು ಈ ವಸ್ತುಗಳನ್ನು ತಮ್ಮ ಚೀಲದಲ್ಲಿ ಇಟ್ಟುಕೊಳ್ಳಿ

ಕಾಂತಾ ಕಸೂತಿ ದುಪ್ಪಟ್ಟ : ಇದು ಪಶ್ಚಿಮ ಬಂಗಾಳದಲ್ಲಿ ಪ್ರಸಿದ್ಧವಾಗಿದೆ. ಈ ಕಸೂತಿಯು ಬಂಗಾಳದ ಗ್ರಾಮೀಣ ಮಹಿಳೆಯರ ಅದ್ಭುತ ಕೌಶಲ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸುತ್ತದೆ. ಇದನ್ನು ಆರಾಮವಾಗಿ ಧರಿಸಬಹುದು.

 

Different styled duppattas to give you new look


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...