Kannada Duniya

ಸ್ಪೆಷಲ್ ಉಪ್ಪಿಟ್ಟು ರೆಸೆಪಿ ಇಲ್ಲಿದೆ ನೋಡಿ…!

ಹಬ್ಬಗಳು ಬಂತೆಂದರೆ ದೇವರ ಪೂಜೆ ಉಪವಾಸ ಶುರು. ಹೀಗೆ ಉಪವಾಸ ಇರುವವರು ಉಪ್ಪಿಟ್ಟು ಬಿಟ್ಟು ಬೇರೆ ಆಹಾರಗಳನ್ನು ಸೇವಿಸುವುದಿಲ್ಲ. ಹೀಗಾಗಿ ಹೊಸರುಚಿಯ ಉಪ್ಪಿಟ್ಟು ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು:
ನವಣೆ 1- ಕಪ್‌
ತುಪ್ಪ 2- ಚಮಚ
ಜೀರಿಗೆ 1-ಚಮಚ
2- ಲವಂಗ
ಏಲಕ್ಕಿ- 1
ಗೋಡಂಬಿ-4-5
ಒಣದ್ರಾಕ್ಷಿ-8-10
ಹಸಿ ಮೆಣಸಿನಕಾಯಿ-1
ನೀರು-2 ಕಪ್‌
ಬಟಾಣಿ-1/4 ಕಪ್
ನಿಂಬೆರ-2 ಚಮಚ
ಸ್ವಲ್ಪ-ಕೊತ್ತಂಬರಿ ಸೊಪ್ಪು

ಮಾಡುವ ಪದಾರ್ಥಗಳು:

ನವಣೆಯನ್ನು 2-3 ಗಂಟೆಗಳ ನೀರಿನಲ್ಲಿ ನೆನೆ ಹಾಕಿ. ತುಪ್ಪವನ್ನು ಬಿಸಿ ಮಾಡಿ, ಜೀರಿಗೆ , ಲವಂಗ, ಏಲಕ್ಕಿ ಹಾಕಿ. ಈಗ ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿ ಹಾಕಿ 10 ಸೆಕೆಂಡ್ ಫ್ರೈ ಮಾಡಿ. ಈಗ ಹಸಿ ಮೆಣಸಿನ ಕಾಯಿ ಸೇರಿಸಿ 2-3 ಸೆಕೆಂಡ್ ಫ್ರೈ ಮಾಡಿ, ನೀರು ಹಾಕಿ, ಬಟಾಣಿ (ಹಸಿ ಬಟಾಣಿ) ಹಾಕಿ. ರುಚಿಗೆ ತಕ್ಕ ಉಪ್ಪು ಸೇರಿಸಿ.

ಅಂಗೈಯಲ್ಲಿ ರೇಖೆಗಳು ಹೀಗಿದ್ದರೆ ವ್ಯಕ್ತಿ ಒಂದಕ್ಕಿಂತ ಹೆಚ್ಚು ಮದುವೆಯಾಗುತ್ತಾನಂತೆ

ನೀರು ಕುದಿಯಲಾರಂಭಿಸಿದಾಗ ನವಣೆ ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ. ಬೆಂದ ಮೇಲೆ ಉರಿಯಿಂದ ಇಳಿಸಿ ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ನವಣೆ ಉಪ್ಪಿಟ್ಟು ರೆಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...