Kannada Duniya

ಉಪ್ಪಿಟ್ಟು ಎಂದು ಮೂಗು ಮುರಿಯಬೇಡಿ, ಅದರ ಪ್ರಯೋಜನ ತಿಳಿಯಿರಿ

ಉಪ್ಪಿಟ್ಟು ಎಂದರೆ  ಅನೇಕ ಜನರು ಮೂಗು ಮುರಿಯುತ್ತಾರೆ.  ಇದು ಡಯಟ್ ಫುಡ್ ಆಗಿದ್ದು,    ಸುಲಭವಾಗಿ ತಯಾರಿಸಬಹುದಾದ ಟಿಫಿನ್ ಗಳಲ್ಲಿ ಒಂದಾಗಿದೆ. ಇದನ್ನು ಬಹಳ ಕಡಿಮೆ ಸಮಯದಲ್ಲಿ ತಯಾರಿಸುವುದು. ಇನ್ನೂ ಈ   ಉಪ್ಪಿಟ್ಟು ತಿನ್ನುವುದರಿಂದ ವಿವಿಧ ಪ್ರಯೋಜನಗಳನ್ನು ಪಡೆಯಬಹುದು.

ಉಪ್ಪಿಟ್ಟು ಮೂಳೆಗಳನ್ನು ಬಲಪಡಿಸುತ್ತದೆ. ಹೃದಯ ಮತ್ತು ಶ್ವಾಸಕೋಶಗಳನ್ನು ಆರೋಗ್ಯವಾಗಿಡಲು ಇದು ತುಂಬಾ ಉಪಯುಕ್ತವಾಗಿದೆ. ಉಪ್ಪಿಟ್ಟು ಪ್ರೋಟೀನ್ ಕೂಡ ಸಮೃದ್ಧವಾಗಿದೆ. ಇದನ್ನು ಬಹಳ ಕಡಿಮೆ ಎಣ್ಣೆಯಿಂದ ತಯಾರಿಸುವುದರಿಂದ ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ.

ಉಪ್ಪಿಟ್ಟಿನಲ್ಲಿ  ಕ್ಯಾರೆಟ್, ಬೀನ್ಸ್, ಬಟಾಣಿ ಇತ್ಯಾದಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.   ಅದಕ್ಕಾಗಿಯೇ ಉಪ್ಪಿಟ್ಟು ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುವುದು ಮಾತ್ರವಲ್ಲದೆ ಜೀರ್ಣಕ್ರಿಯೆಯನ್ನು ಸುಲಭವಾಗಿ ಸುಧಾರಿಸುತ್ತದೆ. ತೂಕ ಇಳಿಸಿಕೊಳ್ಳಲು ಉಪ್ಪಿಟ್ಟು ತುಂಬಾ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಉಪ್ಪಿಟ್ಟು ಆರೋಗ್ಯಕ್ಕೆ ಒಳ್ಳೆಯದು ಮತ್ತು ಅದಕ್ಕಾಗಿಯೇ ವಾರಕ್ಕೊಮ್ಮೆಯಾದರೂ ತಿನ್ನುವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ..

 

 

 

 

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...