Kannada Duniya

ಚಪಾತಿ ಬಳಸಿ ಮಾಡಿ ಉಪ್ಪಿಟ್ಟು…!

ಮನೆಯಲ್ಲಿ ರಾತ್ರಿ ಊಟಕ್ಕೆಂದು ಚಪಾತಿ ಮಾಡಿರುತ್ತಿರಿ. ಅದು ಮಿಕ್ಕಿರುತ್ತದೆ.ಬೆಳಿಗ್ಗೆ ತಿನ್ನುವುದಕ್ಕೆ ಸಪ್ಪೆ ಸಪ್ಪೆ ಅನಿಸುತ್ತದೆ. ಆಗ ಅದರಿಂದ ಸುಲಭವಾಗಿ ಉಪ್ಪಿಟ್ಟು ಮಾಡಿಕೊಂಡು ತಿನ್ನಬಹುದು. ಇದರಿಂದ ಬೆಳಿಗ್ಗೆ ತಿಂಡಿಯ ತಲೆಬಿಸಿ ತಪ್ಪುತ್ತದೆ.

ಚಪಾತಿ-6, ಎಣ್ಣೆ-2 ಟೀ ಸ್ಪೂನ್, ಈರುಳ್ಳಿ-2, ಹಸಿಮೆಣಸು-3, ಕರಿಬೇವು-ಸ್ವಲ್ಪ, ½ ಟೀ ಸ್ಪೂನ್-ಉಪ್ಪು, ಮೊಟ್ಟೆ-2, 1 ಟೀ ಸ್ಪೂನ್-ಕಾಳುಮೆಣಸಿನ ಪುಡಿ, ಸ್ವಲ್ಪ-ಕೊತ್ತಂಬರಿಸೊಪ್ಪು.

ಇಡ್ಲಿ ತುಂಬಾ ಮೃದುವಾಗಿ ಬರಲು ಈ ಐದು ವಿಧಾನ ಅನುಸರಿಸಿ

ಮೊದಲು ಚಪಾತಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಈರುಳ್ಳಿ, ಕರಿಬೇವು, ಹಸಿಮೆಣಸು, ಉಪ್ಪು ಹಾಕಿ ಮಿಕ್ಸ್ ಮಾಡಿ. ಈರುಳ್ಳಿ ಮೆತ್ತಗಾದ ಬಳಿಕ ಮೊಟ್ಟೆಯನ್ನು ಒಡೆದು ಹಾಕಿ ಅದಕ್ಕೆ ಕಾಳುಮೆಣಸಿನ ಪುಡಿ ಸೇರಿಸಿ ಅದಕ್ಕೆ ಕತ್ತರಿಸಿದ ಚಪಾತಿ ಹಾಕಿ 5 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಚಪಾತಿ ಚೆನ್ನಾಗಿ ಡ್ರೈ ಆದ ಬಳಿಕಅದಕ್ಕೆ ಕೊತ್ತಂಬರಿಸೊಪ್ಪು ಸೇರಿಸಿ ಮಿಕ್ಸ್ ಮಾಡಿದರೆ ಚಪಾತಿ ಉಪ್ಪಿಟ್ಟು ಸವಿಯಲು ಸಿದ್ಧ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...