Kannada Duniya

ರುಚಿಯಾದ ಬಾಳೆಹಣ್ಣಿನ ಬೊಂಡಾ ಮಾಡುವ ವಿಧಾನ

ಮನೆಯಲ್ಲಿ ಬಾಳೆಹಣ್ಣು ಇದೆಯಾ…? ಹಾಗಾದ್ರೆ ತಡಯಾಕೆ…? ಇದರಿಂದ ರುಚಿಯಾದ ಸಿಹಿ ಬೊಂಡಾ ಮಾಡಿಕೊಂಡು ಸವಿಯಿರಿ. ವಿಭಿನ್ನ ರುಚಿಯ ಈ ಬೊಂಡಾ ತಿನ್ನುತ್ತಿದ್ದರೆ ಹೊಟ್ಟೆಗೆ ಹೋಗಿದ್ದೆ ಗೊತ್ತಾಗುವುದಿಲ್ಲ!

ಬೇಕಾಗುವ ಸಾಮಗ್ರಿಗಳು

ಬಾಳೆಹಣ್ಣು-3, ಬೆಲ್ಲ-3/4 ಕಪ್, ತೆಂಗಿನಕಾಯಿ ತುರಿ-1/4 ಕಪ್, ತುಪ್ಪ-1 ಟೇಬಲ್ ಸ್ಪೂನ್, ಗೋಧಿ ಹಿಟ್ಟು-1 ಕಪ್, ಮೈದಾ ಹಿಟ್ಟು-1 ಕಪ್, ಬೇಕಿಂಗ್ ಸೋಡಾ-1/4 ಟೀ ಸ್ಪೂನ್, ಉಪ್ಪು-1/4 ಟೀ ಸ್ಪೂನ್, ಏಲಕ್ಕಿ-8, ಜೀರಿಗೆ-1/4 ಟೀ ಸ್ಪೂನ್, ಉಗುರು ಬೆಚ್ಚಗಿನ ನೀರು-1/4 ಕಪ್, ಎಣ್ಣೆ- ಕರಿಯಲು ಅಗತ್ಯವಿರುವಷ್ಟು.

ಮಾಡುವ ವಿಧಾನ

ಒಂದು ಬೌಲ್ ಗೆ ಸಿಪ್ಪೆ ತೆಗೆದ ಬಾಳೆಹಣ್ಣು ಹಾಕಿ ಅದನ್ನು ಚೆನ್ನಾಗಿ ಕಿವುಚಿಕೊಳ್ಳಿ. ಇನ್ನೊಂದು ಪಾತ್ರೆಗೆ ಬೆಲ್ಲ ಹಾಕಿ ಅದಕ್ಕೆ 2 ಟೇಬಲ್ ಸ್ಪೂನ್ ನೀರು ಸೇರಿಸಿ 3 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಒಂದು ಅಗಲವಾದ ಪಾತ್ರೆಗೆ ಕಿವುಚಿದ ಬಾಳೆಹಣ್ಣು, ತೆಂಗಿನಕಾಯಿ ತುರಿ, ತಣ್ಣಗಾದ ಬೆಲ್ಲದ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ನಂತರ ಇನ್ನೊಂದು ಬೌಲ್ ಗೆ ಮೈದಾಹಿಟ್ಟು, ಗೋಧಿಹಿಟ್ಟು, ಬೇಕಿಂಗ್ ಸೋಡಾ, ಉಪ್ಪು, ಏಲಕ್ಕಿ ಪುಡಿ, ಜೀರಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಬಾಳೆಹಣ್ಣಿನ ಮಿಶ್ರಣವನ್ನು ಸೇರಿಸಿ ಉಗುರು ಬೆಚ್ಚಗಿನ ನೀರು ಹಾಕಿ ಮಿಕ್ಸ್ ಮಾಡಿಕೊಂಡು 2 ಗಂಟೆಗಳ ಕಾಲ ಹಾಗೇಯೇ ಇಡಿ. ನಂತರ ಒಲೆಯ ಮೇಲೆ ಎಣ್ಣೆ ಕಾಯಲು ಇಟ್ಟು ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದು ಕಾದ ಎಣ್ಣೆಗೆ ಹಾಕಿ ಹೊಂಬಣ್ಣ ಬರುವವರಗೆ ಕರಿಯಿರಿ. ರುಚಿಯಾದ ಬಾಳೆಹಣ್ಣಿನ ಬೊಂಡಾ ಸವಿಯಲು ರೆಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...