Kannada Duniya

ರುಚಿಯಾದ ಚಿಕನ್ ಫ್ರೈಡ್ ರೈಸ್ ಮಾಡುವ ವಿಧಾನ ಇಲ್ಲಿದೆ ನೋಡಿ….!

ಹೆಚ್ಚಿನವರು ಚಿಕನ್ ತಿನ್ನಲು ಇಷ್ಟಪಡುತ್ತಾರೆ. ಅದಕ್ಕಾಗಿ ಅಂತಹವರಿಗೆ ಚಿಕನ್ ರೆಸಿಪಿ ತುಂಬಾ ಇಷ್ಟವಾಗುತ್ತದೆ. ಅದರಲ್ಲೂ ಚಿಕನ್ ಫ್ರೈಡ್ ರೈಸ್ ಎಲ್ಲರ ನೆಚ್ಚಿನ ಅಡುಗೆಯಾಗಿದೆ. ಹಾಗಾದ್ರೆ ಹೋಟೆಲ್ ನಲ್ಲಿ ತಯಾರಿಸುವಂತಹ ರುಚಿಕರವಾದ ಚಿಕನ್ ಫ್ರೈಡ್ ರೈಸ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಬೇಕಾಗುವ ಸಾಮಾಗ್ರಿಗಳು :

3 ಚಮಚ ವೆಜಿಟೇಬಲ್ ಆಯಿಲ್, 4 ಮೊಟ್ಟೆ, ½ ಕಪ್ ಕತ್ತರಿಸಿದ ಈರುಳ್ಳಿ, ½ ಕಪ್ ಕ್ಯಾಪ್ಸಿಕಂ, 1 ಕಪ್ ಬೀನ್ಸ್, 2 ಕಪ್ ಕೋಳಿ ಮಾಂಸ, 4 ಕಪ್ ಬೇಯಿಸಿದ ಬಾಸ್ಮತಿ ರೈಸ್, ¼ ಕಪ್ ಸೋಯಾ ಸಾಸ್, 3 ಚಮಚ ಚಿಲ್ಲಿ ಗಾರ್ಲಿಕ್ ಸಾಸ್, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ :

ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮೊಟ್ಟೆಯನ್ನು ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ 2 ನಿಮಿಷ ಬೇಯಿಸಿ. ನಂತರ ಮತ್ತೊಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ ಅದಕ್ಕೆ ಈರುಳ್ಳಿ, ಕ್ಯಾಪ್ಸಿಕಂ ಮತ್ತು ಬೀನ್ಸ್ ಸೇರಿಸಿ 5 ನಿಮಿಷ ಫ್ರೈ ಮಾಡಿ. ನಂತರ ಚಿಕನ್ ಹಾಕಿ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಫ್ರೈ ಮಾಡಿ. ಬಳಿಕ ಅದಕ್ಕೆ ಬಾಸ್ಮತಿ ಅನ್ನ, ಸೋಯಾ ಸಾಸ್ ಮತ್ತು ಚಿಲ್ಲಿ ಗಾರ್ಲಿಕ್ ಸಾಸ್ ಸೇರಿಸಿ ಸುಮಾರು 5 ನಿಮಿಷಗಳ ಕಾಲ ಬೇಯಿಸಿ. ನಂತರ ಹುರಿದ ಮೊಟ್ಟೆ ಸೇರಿಸಿದರೆ ಚಿಕನ್ ಫ್ರೈಡ್ ರೈಸ್ ರೆಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...