Kannada Duniya

ಮನೆಯಲ್ಲಿ ಮಾಡಿ ಹೋಟೆಲ್ ಸ್ಟೈಲ್ ನ ಸೀಗಡಿ ಘೀ ರೋಸ್ಟ್

ಬಿಸಿ ಬಿಸಿ ಅನ್ನಕ್ಕೆ ಅಥವಾ ನೀರುದೋಸೆ ಮಾಡಿದಾಗ ಸೀಗಡಿ ಘೀ ರೋಸ್ಟ್ ಇದ್ದರೆ ಹೊಟ್ಟೆ ತುಂಬಿದ್ದೆ ಗೊತ್ತಾಗುವುದಿಲ್ಲ. ಹೇಗೆ ಮಾಡಿದರೂ ಹೋಟೆಲ್ ಸ್ಟೈಲ್ ನಲ್ಲಿ ಘೀ ರೋಸ್ಟ್ ಮಾಡುವುದಕ್ಕೆ ಬರುವುದಿಲ್ಲ ಎನ್ನುವವರು ಒಮ್ಮೆ ಈ ವಿಧಾನ ಅನುಸರಿಸಿ ನೋಡಿ.

ಬೇಕಾಗುವ ಸಾಮಗ್ರಿಗಳು

ಸೀಗಡಿ-1/4 ಕೆಜಿ. ಕೊತ್ತಂಬರಿ ಬೀಜ-2 ಟೇಬಲ್ ಸ್ಪೂನ್, ಜೀರಿಗೆ- 1ಟೀ ಸ್ಪೂನ್, ಮೆಂತ್ಯ-1 ಟೀ ಸ್ಪೂನ್, ಕಾಳುಮೆಣಸು-1 ಟೀ ಸ್ಪೂನ್, ಸಾಸಿವೆ-1 ಟೀ ಸ್ಪೂನ್, ಗಸಗಸೆ-1 ಟೀ ಸ್ಪೂನ್, ಗೋಡಂಬಿ-4, ಬ್ಯಾಡಗಿಮೆಣಸು-10, ಬೆಳ್ಳುಳ್ಳಿ-10 ಎಸಳು, ತುಪ್ಪ 4 ಟೇಬಲ್ ಸ್ಪೂನ್, ಬೆಲ್ಲ-ಸಣ್ಣ ತುಂಡು, ಹುಣಸೆಹಣ್ಣಿನ ಪೇಸ್ಟ್-2 ಟೇಬಲ್ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು, ಕರಿಬೇವಿನ ಎಸಳು-ಎಳೆಂಟು, ಲಿಂಬೆಹಣ್ಣಿನ ರಸ-2 ಚಮಚ, ಅರಿಶಿನ-1/4 ಟೀ ಸ್ಪೂನ್.

ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 2 ಟೇಬಲ್ ಸ್ಪೂನ್, ಕೊತ್ತಂಬರಿ ಬೀಜ, 1 ಟೀ ಸ್ಪೂನ್- ಜೀರಿಗೆ, 1 ಟೀ ಸ್ಪೂನ್.1 ಟೀ ಸ್ಪೂನ್- ಮೆಂತ್ಯಕಾಳು, 1 ಟೀ ಸ್ಪೂನ್- ಸಾಸಿವೆ, 1 ಟೀ ಸ್ಪೂನ್- ಗಸಗಸೆ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಂಡು ಒಂದು ತಟ್ಟೆಗೆ ತೆಗೆದುಕೊಳ್ಳಿ. 10 ಬ್ಯಾಡಗಿ ಮೆಣಸು ತೆಗೆದುಕೊಂಡು ಒಂದು ಬೌಲ್ ಗೆ ಹಾಕಿಕೊಳ್ಳಿ. ಅದಕ್ಕೆ 4 ಗೋಡಂಬಿಯನ್ನು ಹಾಕಿ ಇದು ನೆನೆಯಲು ಬೇಕಾಗುವಷ್ಟು ಬಿಸಿನೀರು ಹಾಕಿ 10 ಗಂಟೆಗಳ ಕಾಲ ಹಾಗೇ ಇಡಿ.ನಂತರ ಒಂದು ಮಿಕ್ಸಿ ಜಾರಿಗೆ ನೆನೆಸಿಟ್ಟುಕೊಂಡ ಮೆಣಸು ಹಾಗೂ ಗೋಡಂಬಿ, ಹುರಿದಟ್ಟುಕೊಂಡ ಮಸಾಲೆ, ಸಣ್ಣ ತುಂಡು ಬೆಲ್ಲ, 10 ಎಸಳು ಬೆಳ್ಳುಳ್ಳಿ, 2 ಟೇಬಲ್ ಸ್ಪೂನ್- ಹುಣಸೆಹಣ್ಣಿನ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.

ನಂತರ ತೊಳೆದಿಟ್ಟುಕೊಂಡ ಸೀಗಡಿಯನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪು, ಅರಿಶಿನ, 1 ಚಮಚದಷ್ಟು ಲಿಂಬೆರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮ್ಯಾರಿನೇಟ್ ಮಾಡಿಕೊಳ್ಳಿ.ಒಲೆಯ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 3 ಟೇಬಲ್ ಸ್ಪೂನ್ ತುಪ್ಪ ಹಾಕಿ ನಂತರ ಮಾಡಿಟ್ಟುಕೊಂಡ ಘೀ ರೋಸ್ಟ್ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಮಿಕ್ಸ್ ಮಾಡಿಕೊಳ್ಳುತ್ತಾ ಇರಿ. ಮಸಾಲೆ ತುಸು ದಪ್ಪಗಾದರೆ ಬಿಸಿನೀರು ಸೇರಿಸಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿ.ಮಸಾಲೆ ಚೆನ್ನಾಗಿ ಬೇಯಲಿ. ನಂತರ ಇನ್ನೊಂದು ಒಲೆಯನ್ನು ಹಚ್ಚಿ ಒಂದು ಪ್ಯಾನ್ ಇಟ್ಟು 1 ಟೇಬಲ್ ಸ್ಪೂನ್ ತುಪ್ಪ ಹಾಕಿ ಅದು ಬಿಸಿಯಾಗುತ್ತಿದ್ದಂತೆ ಅದಕ್ಕೆ ಸೀಗಡಿಯನ್ನು ಹಾಕಿ 3 ನಿಮಿಷಗಳ ಕಾಲ ಇದನ್ನು ಬೇಯಿಸಿಕೊಳ್ಳಿ. ಇದನ್ನು ಮಸಾಲೆಗೆ ಸೇರಿಸಿ ಸ್ವಲ್ಪ ತುಪ್ಪ, 1 ಚಮಚದಷ್ಟು ಲಿಂಬೆರಸ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಎಳೆಂಟು ಎಸಳು ಕರಿಬೇವು ಸೇರಿಸಿದರೆ ರುಚಿಯಾದ ಸೀಗಡಿ ಘೀ ರೋಸ್ಟ್ ಸವಿಯಲು ಸಿದ್ಧ.

 

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...