Kannada Duniya

ಉತ್ತರ ಕರ್ನಾಟಕ ಶೈಲಿಯ ಗಿರ್ಮಿಟ್ ಮಾಡುವ ವಿಧಾನ ಇಲ್ಲಿದೆ…!

ಉತ್ತರ ಕರ್ನಾಟಕ ಶೈಲಿಯ ಊಟ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಸಿಟಿ ಮಂದಿ ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಮಂಡಕ್ಕಿ ಇದ್ದರೆ ಸಾಕು ,ಚಹಾ ಜೊತೆಗೆ ಗಿರ್ಮಿಟ್‌ ಮತ್ತು ಬಜ್ಜಿ ಮಾಡಿ .
ಹಾಗಾದರೆ ಇಲ್ಲಿದೆ ನೋಡಿ ಸಿಂಪಲ್ ಗಿರ್ಮಿಟ್ ಮಾಡೋ ವಿಧಾನ ನೋಡೋಣ-

ಬೇಕಾಗುವ ಸಾಮಾಗ್ರಿಗಳು:

ಮಂಡಕ್ಕಿ/ಕಡಲೆಪುರಿ – 3 ಕಪ್
ಟೊಮೇಟೊ – 1
ಈರುಳ್ಳಿ – 2
ಹುಣಸೆ ರಸ – 1/4 ಕಪ್
ಕೊತ್ತಂಬರಿ ಸೊಪ್ಪು
ಹುರಿಗಡಲೆ ಪುಡಿ – 2 ಚಮಚ
ಹಸಿರು ಮೆಣಸಿನಕಾಯಿ – 3
ಜೀರಿಗೆ – 2 ಚಮಚ
ಎಣ್ಣೆ – 2 ಚಮಚ
ಸಾಸಿವೆ – 2 ಚಮಚ
ಬೆಲ್ಲ- ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ಕರಿಬೇವು- ಸ್ವಲ್ಪ
ಅರಿಶಿಣ ಪುಡಿ ಸ್ವಲ್ಪ
ಸೇವ್/ಖಾರ ಬೂಂದಿ

ಮಾಡುವ ವಿಧಾನ :

ಮೊದಲಿಗೆ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಗ್ಗರಣೆಗೆ ಸಾಸಿವೆ, ಜೀರಿಗೆ ಹಾಕಬೇಕು. ನಂತರ ಸಣ್ಣಗೆ ಹಚ್ಚಿದ ಹಸಿರು ಮೆಣಸಿನಕಾಯಿ, ಕರಿಬೇವು ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಬೇಕು. ನಂತರ ಅರಿಶಿಣ ಮತ್ತು ಸಣ್ಣಗೆ ಹಚ್ಚಿದ ಈರುಳ್ಳಿಯಲ್ಲಿ ಮುಕ್ಕಾಲು ಭಾಗದಷ್ಟು ಹಾಕಿ 2 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಅದಕ್ಕೆ ಸ್ವಲ್ಪ ಹುಣಸೆರಸ ಮತ್ತು ಬೆಲ್ಲ ಹಾಕಿ ಮಿಕ್ಸ್ ಮಾಡಿ.
ರುಚಿಗೆ ತಕ್ಕಂತೆ ಉಪ್ಪು ಹಾಕಿ 2 ನಿಮಿಷ ಕುದಿಸಿ, ಸ್ವಲ್ಪ ಗಟ್ಟಿಯಾದ ನಂತರ ಒಲೆಯಿಂದ ಕೆಳಗಿಳಿಸಿದ್ರೆ ಗಿರ್ಮಿಟ್ ಮಸಾಲಾ ರೆಡಿ.

ಮೈಸೂರು ಮೊಸರು ಬೋಂಡಾ ತಯಾರಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ…!

ನಂತರ ಇನ್ನೊಂದು ಪಾತ್ರೆಯಲ್ಲಿ ಮಂಡಕ್ಕಿ ಹಾಕಿ ಅದಕ್ಕೆ ಗಿರ್ಮಿಟ್ ಮಸಾಲಾ, ಸಣ್ಣಗೆ ಕತ್ತರಿಸಿದ ಟೊಮೆಟೊ, ಉಳಿದಿರೋ ಈರುಳ್ಳಿ, 2 ಚಮಚ ಹುರಿಗಡಲೆ ಪುಡಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು. ನಂತರ ಕೊನೆಯಲ್ಲಿ
ಸ್ವಲ್ಪ ಸೇವ್ ಉದುರಿಸಿದ್ರೆ ಗಿರ್ಮಿಟ್ ಮಿರ್ಚಿ ಬಜ್ಜಿ ಜೊತೆಗೆ ತಿನ್ನಲು ಸಿದ್ಧ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...