Kannada Duniya

ಮೈಸೂರು ಮೊಸರು ಬೋಂಡಾ ತಯಾರಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ…!

ಮನೆಗೆ ತಕ್ಷಣ ಯಾರಾದ್ರೂ ಗೆಸ್ಟ್‌ ಬಂದ್ರೆ  ಏನು ಮಾಡೋದು ಎಂದು ಯೋಚಿಸುತ್ತೀರಿ. ಅವರಿಗೆ ಟೀ ಜೊತೆ ಸ್ನ್ಯಾಕ್ಸ್ ಇದ್ದರೆ ಚೆನ್ನಾಗಿರುತ್ತದೆ ಎಂದು ಅಂದುಕೊಳ್ಳುತ್ತಾರೆ. ಹಾಗಿದ್ದಲ್ಲಿ ತಕ್ಷಣಕ್ಕೆ ಮೊಸರು ಬೋಂಡಾ ಮಾಡಿ ನೋಡಿ. ಇದು ಸವಿಯಲು ಬಲು ರುಚಿಕರವಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು:
ಮೈದಾ ಹಿಟ್ಟು – 1/2 ಕೆಜಿ
ಅಕ್ಕಿ ಹಿಟ್ಟು – 1 ಚಮಚ
ಗಟ್ಟಿ ಮೊಸರು – 1/4 ಲೀಟರ್
ಹಸಿಮೆಣಸಿನಕಾಯಿ – 4-5
ತುರಿದ ತೆಂಗಿನ ಕಾಯಿ – ಸ್ವಲ್ಪ
ಈರುಳ್ಳಿ – 2
ಜೀರಿಗೆ -1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ

‘ಹರಭರ ಕಬಾಬ್’ ಮನೆಯಲ್ಲಿ ಮಾಡಿ ನೋಡಿ….!

ಮಾಡುವುದು ಹೇಗೆ
ಮೊದಲು ಒಂದು ಬಟ್ಟಲಿಗೆ ಮೈದಾ ಹಿಟ್ಟನ್ನು ಹಾಕಿಕೊಳ್ಳಬೇಕು. ನಂತರ ಆ ಹಿಟ್ಟಿಗೆ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿಕೊಳ್ಳಬೇಕು. ನಂತರ ಅದಕ್ಕೆ ಸಣ್ಣಗೆ ಹಚ್ಚಿದ ಹಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಜೀರಿಗೆ, ತೆಂಗಿನ ಕಾಯಿ, ಉಪ್ಪು ಹಾಕಿ ಕಲಸಿ. ನಂತರ ಗಟ್ಟಿ ಮೊಸರು ಹಾಕಿ ಬೋಂಡಾ ಹದಕ್ಕೆ ಕಲಸಿ. ನಂತರ ಕಾದ ಎಣ್ಣೆಗೆ ಬೋಂಡಾ ರೀತಿ ಉಂಡೆಗಳನ್ನು ಹಾಕಿ ಗೋಲ್ಡನ್ ಬ್ರೌನ್ ಆಗೋ ತನಕ ಕರಿಯಿರಿ.ಮೊಸರು ಬೋಂಡಾ ಸವಿಯಲು ಸಿದ್ಧ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...