Kannada Duniya

ಇಲ್ಲಿದೆ ರೆಸೆಪಿ…! ಅವಲಕ್ಕಿ ರೊಟ್ಟಿ ತಿಂದಿದಿರಾ….?

ಬೇಕಾಗುವ ಪದಾರ್ಥಗಳು:

1 ಕಪ್ ತೆಳು ಅವಲಕ್ಕಿ,
1 ಕಪ್ ಅಕ್ಕಿ ಹಿಟ್ಟು,
1 ಈರುಳ್ಳಿ (ಕತ್ತರಿಸಿದ), ಕರಿಬೇವಿನ ಎಲೆಗಳು
(ಕತ್ತರಿಸಿದ),
2 ಚಮಚ ಕೊತ್ತಂಬರಿ ಸೊಪ್ಪು,
1 ಇಂಚಿನ ಶುಂಠಿ (ಕತ್ತರಿಸಿದ),
2 ಮೆಣಸಿನಕಾಯಿ (ಕತ್ತರಿಸಿದ), 1 ಚಮಚ ಜೀರಿಗೆ,
½ ಚಮಚ ಉಪ್ಪು,
ಬಿಸಿ ನೀರು,
ಎಣ್ಣೆ,

ಮಾಡುವ ವಿಧಾನ:

ಒಂದು ಬಟ್ಟಲಿನಲ್ಲಿ 1 ಕಪ್ ಅವಲಕ್ಕಿ ತೆಗೆದುಕೊಂಡು ನೀರು ಹಾಕಿ ತೊಳೆದು, ಮತ್ತೊಂದು ಬಟ್ಟಲಿಗೆ ವರ್ಗಾಯಿಸಿ. ಈಗ ಅದಕ್ಕೆ ಅಕ್ಕಿ ಹಿಟ್ಟು, ಈರುಳ್ಳಿ, ಕರಿಬೇವು ಮತ್ತು ಕೊತ್ತಂಬರಿ ಸೇರಿಸಿ. ನಂತರ ಶುಂಠಿ, ಮೆಣಸಿನಕಾಯಿ, ಜೀರಿಗೆ ಮತ್ತು ರುಚಿಗೆ ಉಪ್ಪು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.

ಈಗ ಇದಕ್ಕೆ ಬಿಸಿ ನೀರನ್ನು ಸೇರಿಸಿ, ತಟ್ಟಲು ಸರಿಹೊಂದುವಷ್ಟು ಪ್ರಮಾಣ ಹಿಟ್ಟನ್ನು ತಯಾರಿಸಿ. ನಂತರ ಬಾಳೆ ಎಲೆಯನ್ನು ತೆಗೆದುಕೊಂಡು ಎಣ್ಣೆ ಹಚ್ಚಿ. ಅದರ ಮೇಲೆ ಉಂಡೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ನಿಧಾನವಾಗಿ ತೆಳುವಾಗಿ ತಟ್ಟುತ್ತಾ ಬನ್ನಿ.

ಪ್ರತಿ ಶನಿವಾರ ತಪ್ಪದೇ ಇದನ್ನು ತಿಂದ್ರೆ ಒಲಿಯುತ್ತೆ ಅದೃಷ್ಟ…!

ಈಗ ತಟ್ಟಿದ ರೊಟ್ಟಿಯನ್ನು ಬಿಸಿ ತವಾದ ಮೇಲೆ ಹಾಕಿ, ನಿಧಾನವಾಗಿ ಒತ್ತಿರಿ. ಒಂದು ನಿಮಿಷದ ನಂತರ, ಬಾಳೆ ಎಲೆಯನ್ನು ನಿಧಾನವಾಗಿ ತೆಗೆಯಿರಿ. ಒಂದು ಕಡೆ ಬೆಂದ ನಂತರ ಮತ್ತೊಂದು ಬದಿ ತಿರುಗಿಸಿ, ಎಣ್ಣೆ ಸೇರಿಸಿ. ಎರಡೂ ಬದಿ ಸ್ವಲ್ಪ ಗೋಲ್ಡನ್ ಆಗುವವರೆಗೆ ಬೇಯಿಸಿ. ಅಂತಿಮವಾಗಿ, ತೆಂಗಿನಕಾಯಿ ಚಟ್ನಿಯೊಂದಿಗೆ ಅವಲಕ್ಕಿ ರೊಟ್ಟಿ ಸವಿಯಲು ಸಿದ್ಧ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...