Kannada Duniya

ಈ ರುಚಿಕರವಾದ ಚಾಕೋಲೆಟ್ ಮೌಸಿ ಮಕ್ಕಳಿಗೆ ಮಾಡಿಕೊಟ್ಟರೆ ಖುಷಿಯಿಂದ ತಿನ್ನುತ್ತಾರೆ!

ಮಕ್ಕಳಿಗೆ ಕೇಕ್ ಎಂದರೆ ತುಂಬಾ ಇಷ್ಟ ಎಂದು ಹೊರಗಡೆಯಿಂದ ತಂದು ಕೊಡುತ್ತೀರಾ….? ಇದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಚಾಕೋಲೆಟ್ ಮೌಸಿ ಇದೆ. ಮಕ್ಕಳಿಗೆ ಮಾಡಿಕೊಟ್ಟರೆ ಖುಷಿಯಿಂದ ಸವಿಯುತ್ತಾರೆ.

ಬೇಕಾಗುವ ಸಾಮಗ್ರಿಗಳು

1 ಕಪ್ –ಚಿಕ್ಕದಾಗಿ ಕತ್ತರಿಸಿದ ಡಾರ್ಕ್ ಚಾಕೋಲೆಟ್, ½ ಟೀ ಸ್ಪೂನ್-ಕಾಫಿ ಪುಡಿ, 2-ಮೊಟ್ಟೆ, 5 ಟೇಬಲ್ ಸ್ಪೂನ್-ಕ್ಯಾಸ್ಟರ್ ಸಕ್ಕರೆ, 1 ಟೀ ಸ್ಪೂನ್-ವೆನಿಲ್ಲಾ ಎಸೆನ್ಸ್, ¾ ಕಪ್- ಫ್ರೆಶ್ ಕ್ರೀಂ.

ಮಾಡುವ ವಿಧಾನ

ಒಂದು ಬೌಲ್ ಗೆ ಕಾಫಿ ಪುಡಿ ಹಾಗೂ 4 ಟೇಬಲ್ ಸ್ಪೂನ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 20 ಸೆಕೆಂಡುಗಳ ಕಾಲ ಮೈಕ್ರೋವೇವ್ ನಲ್ಲಿಡಿ.ನಂತರ ಅದನ್ನು ಹೊರತೆಗೆದು ಅದಕ್ಕೆ ವೆನಿಲ್ಲಾ ಎಸೆನ್ಸ್ ಸೇರಿಸಿ ಮಿಕ್ಸ್ ಮಾಡಿ ಇಡಿ.ಇನ್ನೊಂದು ಬೌಲ್ ಗೆ ಚಾಕೋಲೆಟ್ ಹಾಕಿ 2 ನಿಮಿಷಗಳ ಕಾಲ ಮೈಕ್ರೋವೇವ್ ನಲ್ಲಿಟ್ಟು ನಂತರ ಮಿಕ್ಸ್ ಮಾಡಿಕೊಳ್ಳಿ. ಒಂದು ಪಾತ್ರೆಗೆ ತಾಜಾ ಕ್ರೀಂ ಅನ್ನು ಹಾಕಿ ಅದನ್ನು 2 ನಿಮಿಷಗಳ ಕಾಲ ಬೀಟರ್ ನಲ್ಲಿ ಚೆನ್ನಾಗಿ ಬೀಟ್ ಮಾಡಿಕೊಳ್ಳಿ.ಎರಡು ಗ್ಲಾಸ್ ತೆಗೆದುಕೊಂಡು ಅದಕ್ಕೆ ಮೊಟ್ಟೆಯನ್ನು ಒಡೆದು ಹಾಕಿ ಒಂದು ಗ್ಲಾಸಿಗೆ ಮೊಟ್ಟೆಯ ಹಳದಿ ಭಾಗ ಹಾಕಿ ಇನ್ನೊಂದಕ್ಕೆ ಮೊಟ್ಟೆಯ ಬಿಳಿಭಾಗ ಹಾಕಿ.

ಮೊಟ್ಟೆಯ ಬಿಳಿಭಾಗವಿರುವ ಗ್ಲಾಸಿಗೆ 4 ½ ಟೇಬಲ್ ಸ್ಪೂನ್ ಕ್ಯಾಸ್ಟರ್ ಸಕ್ಕರೆಯನ್ನು ಹಾಕಿ ಎಲೆಕ್ಟ್ರಿಕ್ ಬೀಟರ್ ನಲ್ಲಿ ಬೀಟ್ ಮಾಡಿಕೊಳ್ಳಿ.ಮೊಟ್ಟೆಯ ಹಳದಿ ಭಾಗವಿರುವ ಗ್ಲಾಸಿಗೆ ½ ಟೇಬಲ್ ಸ್ಪೂನ್ ಕ್ಯಾಸ್ಟರ್ ಶುಗರ್ ಹಾಕಿ 30 ಸೆಕೆಂಡುಗಳ ಕಾಲ ಬೀಟ್ ಮಾಡಿಕೊಳ್ಳಿ.ನಂತರ ಇದಕ್ಕೆ ಕಾಫಿ ವೆನಿಲ್ಲಾ ಮಿಕ್ಸರ್ ಹಾಕಿ 30 ಸೆಕೆಂಡುಗಳ ಬೀಟ್ ಮಾಡಿಕೊಳ್ಳಿ. ನಂತರ ಕರಗಿಸಿಕೊಂಡ ಚಾಕೋಲೆಟ್ ಹಾಕಿ 1 ನಿಮಿಷಗಳ ಕಾಲ ಬೀಟ್ ಮಾಡಿಕೊಳ್ಳಿ. ಇದಾದ ಬಳಿಕ ಬೀಟ್ ಮಾಡಿಕೊಂಡ ತಾಜಾ ಕ್ರೀಂ ಅನ್ನು ಹಾಕಿ 1 ನಿಮಿಷಗಳ ಕಾಲ ಬೀಟ್ ಮಾಡಿ..ನಂತರ ಇದಕ್ಕೆ ಮೊಟ್ಟೆಯ ಬಿಳಿಭಾಗದ ಮಿಶ್ರಣವನ್ನು ಸೇರಿಸಿಕೊಳ್ಳಿ. ಕೊನೆಗೆ ಈ ಮಿಶ್ರಣವನ್ನು 6 ಗ್ಲಾಸ್ ಗೆ  ಹಾಕಿ ಫ್ರಿಡ್ಜ್ ನಲ್ಲಿ 1 ಗಂಟೆಗಳ ಕಾಲ ಇಟ್ಟು ನಂತರ ಸರ್ವ್ ಮಾಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...