Kannada Duniya

ದೇಹದ ಆರೋಗ್ಯ ಕಾಪಾಡುವುದರ ಜೊತೆಗೆ ತ್ವಚೆಯ ಆರೋಗ್ಯಕ್ಕೂ ಸಹಕಾರಿ ಈ ಮೊಸರು 

ದೇಹಕ್ಕೆ ಹಲವು ಲಾಭ ಕೊಡುವ ಮೊಸರನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಇದರಲ್ಲಿರುವ ವಿಟಮಿನ್ ಸಿ ಹಾಗೂ ಪ್ರೋಟೀನ್ ಅಂಶ ತ್ವಚೆಯ ಪೋಷಣೆ ಮಾಡುತ್ತದೆ ಹಾಗೂ ಸತ್ತ ಕೋಶಗಳನ್ನು ಶುಚಿಗೊಳಿಸುತ್ತದೆ.

ಮೊಸರಿನಲ್ಲಿರುವ ವಿಟಮಿನ್ ಸಿ ಅಂಶ ಮೊಡವೆಗಳ ವಿರುದ್ಧ ಹೋರಾಡುತ್ತದೆ ಹಾಗೂ ತ್ವಚೆಯನ್ನು ಸ್ವಚ್ಛವಾಗಿಡುತ್ತದೆ.

ಒಣ ತ್ವಚೆಯ ಸಮಸ್ಯೆ ಹೊಂದಿರುವವರು ನಿತ್ಯ ಮೊಸರನ್ನು ಮುಖಕ್ಕೆ ಹಚ್ಚುವುದರಿಂದ ನಿಮ್ಮ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಇದು ತ್ವಚೆಯನ್ನು ಒಳಗಿನಿಂದಲೇ ಹೈಡ್ರೇಟ್ ಮಾಡುತ್ತದೆ.

ಸನ್ ಬರ್ನ್ ಹಾಗೂ ಪಿಗ್ಮೆಂಟೇಶನ್ ಸಮಸ್ಯೆ ಹೊಂದಿರುವವರು ಕ್ರಮೇಣ ತ್ವಚೆಯ ಹೊಳಪು ಕಳೆದುಕೊಳ್ಳಲು ಆರಂಭಿಸುತ್ತಾರೆ. ಮೊಸರಿನಲ್ಲಿರುವ ಆರೋಗ್ಯಕರ ಕೊಬ್ಬು ನಿಮ್ಮ ತ್ವಚೆಯನ್ನು ಹೈಡ್ರೇಟ್ ಆಗಿರುತ್ತದೆ ಮತ್ತು ಸನ್ ಟ್ಯಾನ್ ಅನ್ನು ನಿವಾರಿಸಲು ನೆರವಾಗುತ್ತದೆ.

ಅದೇ ರೀತಿ ಮುಖದಲ್ಲಿ ನೆರಿಗೆಗಳು ಕಾಣಿಸಿಕೊಳ್ಳುವ ಸಮಸ್ಯೆಯನ್ನು ಇದು ದೂರ ಮಾಡಿ ತ್ವಚೆಯನ್ನು ಕೋಮಲವಾಗಿರಿಸುತ್ತದೆ. ಪದೇ ಪದೇ ಕಾಡುವ ಚರ್ಮದ ಅಲರ್ಜಿ ಸಮಸ್ಯೆಯಿಂದಲೂ ನಿಮ್ಮನ್ನು ದೂರವಿಡುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...