Kannada Duniya

ಸೀರೆಗೆ ಪೆಟಿಕೋಟ್ ಆಯ್ಕೆ ಮಾಡುವಾಗ ಈ ವಿಷಯ ತಿಳಿದಿರಲಿ….!

ಸೀರೆಗೆ ಸರಿಯಾದ ಪೆಟಿಕೋಟ್ ಧರಿಸಿದರೆ ಮತ್ರ ಸೀರೆ ಧರಿಸಿದಾಗ ಚೆನ್ನಾಗಿ ಕಾಣುತ್ತದೆ. ಸರಿಯಾಗಿ ನಡೆಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತದೆ. ಹಾಗಾಗಿ ಪೆಟಿಕೋಟ್ ಖರೀದಿಸುವಾಗ ಸರಿಯಾದುದನ್ನು ಆಯ್ಕೆ ಮಾಡಿ.

-ಸೀರೆ ಯಾವ ಬಣ್ಣದಲ್ಲಿದೆಯೋ ಅದೇ ಬಣ್ಣದ ಪೆಟಿಕೋಟ್ ಗಳನ್ನು ಧರಿಸಿ. ಇಲ್ಲವಾದರೆ ಸೀರೆಯ ನೋಟ ಆಕರ್ಷಕವಾಗಿ ಕಾಣುವುದಿಲ್ಲ. ಅದರಲ್ಲೂ ತೆಳ್ಳಗಿರುವ ಸೀರೆಗಳನ್ನು ಧರಿಸುವಾಗ ಅದೇ ಬಣ್ಣದ ಪೆಟಿಕೋಟ್ ಧರಿಸುವುದು ಉತ್ತಮ.

– ಪೆಟಿಕೋಟ್ ಸರಿಯಾದ ಅಳತೆಯಲ್ಲಿದ್ದರೆ ಉತ್ತಮ. ತುಂಬಾ ಬಿಗಿಯಾದ ಪೆಟಿಕೋಟ್ ಅನ್ನು ಧರಿಸಬೇಡಿ. ಇದರಿಂದ ನಿಮಗೆ ನಡೆಯಲು ಕಷ್ಟವಾಗುತ್ತದೆ. ಹಾಗೇ ನಿಮ್ಮ ಎತ್ತರಕ್ಕೆ ಸರಿಹೊಂದುವಂತಹ ಪೆಟಿಕೋಟ್ ಅನ್ನು ಧರಿಸಿ. ಇಲ್ಲವಾದರೆ ಸೀರೆಯ ಹೊರಗೆ ಪೆಟಿಕೋಟ್ ಕಾಣಿಸುತ್ತದೆ. ಇದು ಅಸಹ್ಯಕರವಾಗಿರುತ್ತದೆ. ಮತ್ತು ನಡೆಯುವಾಗ ಕಾಲಿಗೆ ಸಿಕ್ಕಿಕೊಳ್ಳುತ್ತದೆ.

ರೇಷ್ಮೆ ಸೀರೆ ಧರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

-ಉತ್ತಮ ಬಟ್ಟೆಯ ಪೆಟಿಕೋಟ್ ಆಯ್ಕೆ ಮಾಡುವುದು ಅಗತ್ಯ. ಯಾಕೆಂದರೆ ಹಗುರವಾದ ಸೀರೆಗಳಿಗೆ ನೀವು ಸ್ವಲ್ಪ ಭಾರವಾದ ಫ್ಯಾಬ್ರಿಕ್ ಪೆಟಿಕೋಟ್ ಗಳನ್ನು ಧರಿಸಬೇಕು. ಭಾರವಾದ ಸೀರೆಗಳಿಗೆ ಹಗುರವಾದ ಫ್ಯಾಬ್ರಿಕ್ ಪೆಟಿಕೋಟ್ ಗಳನ್ನು ಧರಿಸಿದರೆ ಉತ್ತಮ. ಕಾಟನ್ ಪೆಟೆಕೋಟ್ ಅನ್ನು ಧರಿಸಬೇಡಿ. ಯಾಕೆಂದರೆ ಇದು ನಡೆಯುವಾಗ ಕಾಲನ್ನು ಕಟ್ಟಿಹಾಕುತ್ತದೆ.

-ಇತ್ತೀಚಿನ ದಿನಗಳಲ್ಲಿ ಡಿಸೈನರ್ ಪೆಟಿಕೋಟ್ ಗಳು ಸಹ ಮಾರುಕಟ್ಟೆಗೆ ಬಂದಿದೆ. ಇದು ನಿಮ್ಮ ಸಿಂಪಲ್ ಸೀರೆಗಳಿಗೆ ಗ್ರ್ಯಾಂಡ್ ಲುಕ್ ನೀಡುತ್ತದೆ. ನೀವು ಫ್ಯಾಬ್ರಿಕ್ ಸೀರೆ ಧರಿಸಿದರೆ ಅದಕ್ಕೆ ನೀವು ಪ್ರಿಂಟೆಡ್ ಪೆಟಿಕೋಟ್ ಅನ್ನು ಧರಿಸಬಹುದು.

Tips to choose the right petticoat for your saree


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...