Kannada Duniya

ಗೋರಂಟಿ ಎಲೆ ಬಳಸಿ ನಿಮ್ಮ ಕೂದಲಿನ ಈ ಸಮಸ್ಯೆ ನಿವಾರಿಸಿಕೊಳ್ಳಿ!

ಹಲವರಿಗೆ ಸಣ್ಣ ವಯಸ್ಸಿನಲ್ಲೇ ಕೂದಲು ಬಿಳಿಯಾಗುತ್ತದೆ. ಪೋಷಕಾಂಶಗಳ ಕೊರತೆ, ಜೀವನಶೈಲಿಯಲ್ಲಿ ಬದಲಾವಣೆ ಹಾಗೂ ಮಾಲಿನ್ಯದಿಂದ ಅಕಾಲಿಕ ವಯಸ್ಸಿನಲ್ಲೇ ಕೂದಲು ಬೂದು ಬಣ್ಣಕ್ಕೆ ತಿರುಗುತ್ತದೆ. ಗೋರಂಟಿ ಎಲೆಯಿಂದ ಈ ಸಮಸ್ಯೆಯನ್ನು ಬಗೆಹರಿಸಬಹುದು.

ಗೋರಂಟಿಗೆ ಈ ಕೆಲ ವಸ್ತುಗಳನ್ನು ಸೇರಿಸುವುದರಿಂದ ಆತ್ಯುತ್ತಮ ಫಲಿತಾಂಶ ಪಡೆಯಬಹುದು. ಬಿಳಿ ಕೂದಲನ್ನು ಕಪ್ಪಾಗಿಸಲು ಗೋರಂಟಿಯೊಂದಿಗೆ, ಸಾಸಿವೆ, ತೆಂಗಿನಕಾಯಿ ಅಥವಾ ಹರಳೆಣ್ಣೆಯನ್ನು ಬೆರೆಸಿ ತಲೆಗೆ ಹಚ್ಚಿ. 2-4 ಗಂಟೆ ಬಳಿಕ ಶಾಂಪೂವಿನಿಂದ ತೊಳೆಯಿರಿ.

ಕೂದಲನ್ನು ಕಪ್ಪಾಗಿಸಲು ಗೋರಂಟಿಯೊಂದಿಗೆ ಬಾಳೆಹಣ್ಣನ್ನು ಬೆರೆಸಿ. ಮೊದಲು ಚೆನ್ನಾಗಿ ಮಾಗಿದ ಬಾಳೆಹಣ್ಣನ್ನು ಕಿವುಚಿ ಪೇಸ್ಟ್ ತಯಾರಿಸಿ. ಇದಕ್ಕೆ 3 ಚಮಚ ಗೋರಂಟಿ ಪುಡಿ ಬೆರೆಸಿ ಮಿಶ್ರಣ ಮಾಡಿ. ಬಳಿಕ ಶಾಂಪೂವಿನಿಂದ ತಲೆ ತೊಳೆಯಿರಿ. ವಾರಕ್ಕೆರಡು ಬಾರಿ ಪುನರಾವರ್ತಿಸಿ.

ಗೋರಂಟಿಗೆ ಆಮ್ಲಾವನ್ನು ಬೆರೆಸುವುದರಿಂದಲೂ ಇದೇ ಲಾಭವನ್ನು ಪಡೆಯಬಹುದು. ಈ ಎರಡು ಪುಡಿಗಳನ್ನು ಚೆನ್ನಾಗಿ ಬೆರೆಸಿ ಕೂದಲಿಗೆ ಹಚ್ಚಿ 3 ಗಂಟೆ ಗಳ ಬಳಿಕ ತಲೆ ತೊಳೆಯಿರಿ. ಇದು ಕೂಡಾ ಅಕಾಲಿಕ ಬಿಳಿ ಕೂದಲನ್ನು ಕಪ್ಪಾಗಿಸುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...