Kannada Duniya

‘ಡಾರ್ಕ್ ಸ್ಕಿನ್ ಟೋನ್’ ನವರು ಈ ಬಣ್ಣದ ಸೀರೆಯನ್ನು ಆಯ್ಕೆ ಮಾಡಿ ನೋಡಿ…!

ಸೀರೆ ಎಂದರೆ ಹೆಂಗಳೆಯರಿಗೆ ತುಂಬಾ ಪ್ರೀತಿ. ಹಬ್ಬ, ಹರಿದಿನಗಳು ಬಂದಾಗ ಯಾವುದಾದರೂ ಫಂಕ್ಷನ್ ಗೆ ಹೋಗಬೇಕೆಂದಾಗ ಮೊದಲು ತಲೆಗೆ ಬರುವುದೇ ಯಾವ ಸೀರೆ ಉಟ್ಟುಕೊಳ್ಳಲಿ ಎಂದು. ಸೀರೆ ಚೆನ್ನಾಗಿದೆ ಎಂದು ಖರೀದಿ ಮಾಡುವ ಮೊದಲು ನಮ್ಮ ದೇಹದ ಬಣ್ಣಕ್ಕೆ ಈ ಸೀರೆ ಹೊಂದಾಣಿಕೆಯಾಗುತ್ತದಾ ಎಂದು ಯೋಚಿಸಿ ತೆಗೆದುಕೊಳ್ಳುವುದು ಬಹಳ ಮುಖ್ಯ.ಇಲ್ಲಿ ಕಂದು ಬಣ್ಣದವರಿಗೆ ಯಾವ ಬಣ್ಣದ ಸೀರೆ ಉಟ್ಟರೆ ಆಕರ್ಷಕವಾಗಿ ಕಾಣಬಹುದು ಎಂಬುದರ ಕುರಿತು ಒಂದಷ್ಟು ಮಾಹಿತಿ ಇದೆ ನೋಡಿ.

ನೇರಳೆ ಬಣ್ಣದ ಸೀರೆ: ಇದೊಂದು ವಿಭಿನ್ನವಾದ ಬಣ್ಣವಾಗಿದೆ. ಈ ಬಣ್ಣದ ಸೀರೆಯನ್ನು ನೀವು ಯಾವುದೇ ಕಾರ್ಯಕ್ರಮ ಅಥವಾ ಪಾರ್ಟಿಗೆ ಹಾಕಿಕೊಂಡು ಹೋಗಬಹುದು. ಇದು ನಿಮಗೆ ಕ್ಲಾಸಿಕ್ ಲುಕ್ ನೀಡುತ್ತದೆ. ಇದಕ್ಕೆ ಗುಲಾಬಿ ಬಣ್ಣದ ಕಾಂಬಿನೇಷನ್ ಬ್ಲೌಸ್ ಚೆನ್ನಾಗಿ ಕಾಣುತ್ತದೆ.

ನೆಟ್ ಸೀರೆಗಳನ್ನು ಬಳಸುವಾಗ ಇವುಗಳ ಬಗ್ಗೆ ಹೆಚ್ಚು ಕಾಳಜಿವಹಿಸಿ

ರಾಯಲ್ ಗೋಲ್ಡನ್ ಕಲರ್:ಗೋಲ್ಡನ್ ಕಲರ್ ಸೀರೆ ಬಾರ್ಡರ್ ಇರುವಂತದ್ದು ಅಥವಾ ಬಾರ್ಡರ್ ಇಲ್ಲದೇ ಇರುವಂಥದ್ದು ಇವೆರಡೂ ಕೂಡ ಡಾರ್ಕ್ ಸ್ಕಿನ್ ಟೋನ್ ನವರಿಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ.ರಾತ್ರಿಯ ಫಂಕ್ಷನ್ ಗೆ ಈ ಸೀರೆಯನ್ನು ನೀವು ಧರಿಸಿದರೆ ತುಂಬಾನೇ ಚೆನ್ನಾಗಿ ಕಾಣುತ್ತೀರಿ.

ಕಪ್ಪು ಬಣ್ಣದ ಸೀರೆ: ಕೆಲವರಿಗೆ ಕಪ್ಪು ಬಣ್ಣದ ಸೀರೆ ಎಂದರೆ ತುಂಬಾ ಇಷ್ಟವಿರುತ್ತದೆ. ಆದರೆ ನಮ್ಮ ಸ್ಕಿನ್ ಮೊದಲೇ ಕಂದುಬಣ್ಣ ಬ್ಲಾಕ್ ಸೀರೆ ಒಪ್ಪಲ್ಲ ಎಂದು ಅದನ್ನು ದೂರ ತಳ್ಳುವ ಬದಲು ನಿಮ್ಮ ಸೀರೆ ಕಲೆಕ್ಷನ್ ನಲ್ಲಿ ಬ್ಲಾಕ್ ಸೀರೆಯನ್ನು ಸೇರಿಸಿಕೊಳ್ಳಿ. ಕಪ್ಪು ಬಣ್ಣದ ಸೀರೆ ಬಿಳಿಯ ಚಿಕ್ಕ ಚಿಕ್ಕ ಹೂವಿನ ಡಿಸೈನ್, ಥ್ರೆಡ್ ವರ್ಕಿಂಗ್ ವಿನ್ಯಾಸವಿರುವ ಸೀರೆಯನ್ನು ಉಟ್ಟುಕೊಳ್ಳಿ. ಇದು ಕೂಡ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.

ನೀಲಿ ಬಣ್ಣದ ಸೀರೆ: ಇದು ಕೂಡ ಡಾರ್ಕ್ ಸ್ಕಿನ್ ಟೋನ್ ನವರಿಗೆ ತುಂಬಾ ಚೆನ್ನಾಗಿ ಒಪ್ಪುತ್ತದೆ. ಕೋಬಾಲ್ಟ್ ಬ್ಲೂ, ನೇವಿ ಬ್ಲೂ ಸೀರೆಗಳು ಫಂಕ್ಷನ್ ಗಳಿಗೆ ಹೇಳಿ ಮಾಡಿಸಿದ್ದು. ಇದು ನಿಮಗೆ ಚೆನ್ನಾಗಿ ಒಪ್ಪುತ್ತದೆ.

ಬಿಳಿ ಬಣ್ಣದ ಸೀರೆ: ಇದು ಎಲ್ಲಾ ಬಗೆಯ ಸ್ಕಿನ್ ಟೋನ್ನವರಿಗೆ ತುಂಬಾ ಚೆನ್ನಾಗಿ ಕಾಣುತ್ತದೆ. ಇದಕ್ಕೆ ಕಾಂಟ್ರಾಸ್ಟಿಂಗ್ ಆಭರಣಗಳನ್ನು ಧರಿಸಿಕೊಂಡರೆ ಮತ್ತಷ್ಟು ನಿಮ್ಮ ಸೌಂದರ್ಯ ಎದ್ದು ಕಾಣುತ್ತದೆ.

Saree colors that best suit dusky skin toned ladies


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...