Kannada Duniya

ಮಹಾಶಿವರಾತ್ರಿಯಂದು ಪೂಜೆಯ ಪೂರ್ಣಫಲ ಸಿಗಲು ಶಿವನಿಗೆ ಇದನ್ನು ಅರ್ಪಿಸಿ

ಮಹಾಶಿವರಾತ್ರಿಯ ಒಂದು ವಿಶೇಷವಾದ ದಿನವಾಗಿದೆ. ಈ ದಿನ ಜನರು ಶಿವನನ್ನು ಪೂಜಿಸಿ ವ್ರತಗಳನ್ನು ಮಾಡುತ್ತಾರೆ. ಈ ದಿನ ಶಿವ ಪಾರ್ವತಿ ವಿವಾಹವಾದರು ಎಂಬ ನಂಬಿಕೆ ಇದೆ. ಈ ವರ್ಷ ಮಹಾಶಿವರಾತ್ರಿ ಮಾರ್ಚ್ 8ರಂದು ಬಂದಿದೆ. ಈ ದಿನ ನೀವು ಶಿವ ಪೂಜೆಯ ಸಂಪೂರ್ಣ ಫಲವನ್ನು ಪಡೆಯಲು ಅಕ್ಷತೆಯನ್ನು ಹೀಗೆ ಅರ್ಪಿಸಿ.

ನೀವು ಇಡೀ ಅಕ್ಕಿಯನ್ನು ಅಖಂಡ ರೂಪದಲ್ಲಿ ಶಿವನಿಗೆ ಅರ್ಪಿಸಬೇಕು. ಹಾಗೇ ಶಿವನಿಗೆ ಅಕ್ಷತೆಯನ್ನು ಅರ್ಪಿಸುವಾಗ ಬಿಳಿ ಹೂಗಳು ಮತ್ತು ಬಿಳಿ ಚಂದನವನ್ನು ಅರ್ಪಿಸಿ. ಆದರೆ ಅಕ್ಷತೆಗೆ ಅರಿಶಿನ ಕುಂಕುಮ ಮಿಕ್ಸ್ ಮಾಡಬೇಡಿ ಮತ್ತು ಈ ವೇಳೆ ಹಣ್ಣುಗಳನ್ನು ಅರ್ಪಿಸಬೇಡಿ.

ಈ ದಿನ ಶಿವನಿಗೆ ಅಕ್ಷತೆ ಕಾಳನ್ನು ಅರ್ಪಿಸುವುದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆಯಂತೆ. ನಿಮ್ಮ ದುಃಖಗಳು ದೂರವಾಗಲಿದೆಯಂತೆ. ಅಲ್ಲದೇ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆಯಂತೆ. ಹಾಗೇ ತಾಯಿ ಅನ್ನಪೂರ್ಣೇಶ್ವರಿಯ ಅನುಗ್ರಹದಿಂದ ಮನೆಯಲ್ಲಿ ಧಾನ್ಯಕ್ಕೆ ಕೊರೆತಯಾಗುವುದಿಲ್ಲವಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...