Kannada Duniya

ಮೊಡವೆ ಹೋದರೂ ಅದರ ಕಲೆ ಹಾಗೇ ಉಳಿದಿದೆ ಎಂದು ಚಿಂತಿಸುತ್ತಿದ್ದೀರಾ…?

ಮೊಡವೆಗಳು ದೂರವಾದರೂ ಅವುಗಳ ಕಲೆಗಳು ವರ್ಷಾನುಗಟ್ಟಲೆ ಉಳಿದು ನಿಮ್ಮ ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ. ಯಾವುದೇ ಔಷಧಿ ಪ್ರಯತ್ನಿಸಿದರೂ ಉಪಯೋಗವಾಗುತ್ತಿಲ್ಲ ಎನ್ನುವವರು ಒಮ್ಮೆ ಈ ಮನೆಮದ್ದುಗಳನ್ನು ಟ್ರೈ ಮಾಡಿ ನೋಡಿ.

ಈ ಸೀಸನ್ ನಲ್ಲಿ ಧಾರಾಳವಾಗಿ ದೊರೆಯುವ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಕಿತ್ತಳೆ ಸಿಪ್ಪೆಯಲ್ಲಿರುವ ಸಿಟ್ರಿಕ್ ಅಸಿಡ್ ಗುಣ ಮುಖದ ಕಲೆಗಳನ್ನು ಕಡಿಮೆ ಮಾಡುತ್ತದೆ. ಇದಕ್ಕೆ ಎರಡು ಹನಿ ರೋಸ್ ವಾಟರ್ ಸೇರಿಸಿ ಪೇಸ್ಟ್ ತಯಾರಿಸುವುದು ಇನ್ನೂ ಒಳ್ಳೆಯದು.

ನಿಂಬೆಹಣ್ಣಿನಲ್ಲೂ ಇದೇ ಗುಣವಿದ್ದು ಇತರ ಫೇಸ್ ಪ್ಯಾಕ್ ಗಳ ಜೊತೆಗೆ ನಿಂಬೆರಸವನ್ನು ಬೆರೆಸಬಹುದು. ಮೊಡವೆ ಹಾಗೂ ಕಲೆಗಳನ್ನು ಹೋಗಲಾಡಿಸುವಲ್ಲಿ ಆಲೂಗಡ್ಡೆಯ ಪಾತ್ರವೂ ದೊಡ್ಡದು. ಅದಕ್ಕಾಗಿ ನೀವು ಆಲೂಗಡ್ಡೆ ಹೋಳುಗಳಿಂದ ಮುಖವನ್ನು ಉಜ್ಜಬೇಕು ಇಲ್ಲವೇ ಅದರ ರಸವನ್ನು ಹಿಂಡಿ ತೆಗೆದು ಮುಖಕ್ಕೆ ಹಚ್ಚಬೇಕು.

ಕಡಲೆ ಹಿಟ್ಟಿಗೆ ಮೊಸರು ಸೇರಿಸಿ ಫೇಸ್ ಪ್ಯಾಕ್ ಮಾಡಿಕೊಂಡು ಅರ್ಧಗಂಟೆ ಬಳಿಕ ಮುಖ ತೊಳೆಯುವುದರಿಂದಲೂ ಈ ಕಲೆಗಳು ದೂರವಾಗುತ್ತವೆ. ಅರಶಿನ, ಅಲೋವೇರಾವನ್ನು ಇದರೊಂದಿಗೆ ಸೇರಿಸಿಕೊಳ್ಳಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...