Kannada Duniya

ಈರುಳ್ಳಿ ರಸವನ್ನು ಕೂದಲಿಗೆ ಬಳಸುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ….? ಇಲ್ಲಿದೆ ನೋಡಿ ಮಾಹಿತಿ

ಕೂದಲು ಚೆನ್ನಾಗಿ ಬೆಳೆಯಬೇಕು ಎಂದಿದ್ದರೆ ಈರುಳ್ಳಿ ರಸವನ್ನು ಬಳಸಿ ಎಂದು ಹಲವರು ಹೇಳುವುದನ್ನು ನೀವು ಕೇಳಿರಬಹುದು. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ. ಇದನ್ನು ಬಳಸುವ ವಿಧಾನ ಹೇಗೆ ಎಂದು ಚಿಂತಿಸುತ್ತಿದ್ದೀರಾ….? ಅದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಮೊದಲಿಗೆ ಈರುಳ್ಳಿ ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿ, ಮಿಕ್ಸಿಯಲ್ಲಿ ರುಬ್ಬಿ ಪೇಸ್ಟ್ ತಯಾರಿಸಿ. ಇದರಿಂದ ರಸವನ್ನು ಹಿಂಡಿ ತೆಗೆಯಿರಿ. ನೇರವಾಗಿ ನೆತ್ತಿ ಹಾಗೂ ಕೂದಲಿನ ಬೇರುಗಳಿಗೆ ಹಚ್ಚಿ.

ಕೆಲವು ನಿಮಿಷಗಳ ಕಾಲ ನೆತ್ತಿಯನ್ನು ಮಸಾಜ್ ಮಾಡಿ. ಒಂದು ಗಂಟೆ ಬಳಿಕ ತಲೆ ತೊಳೆಯಿರಿ. ತಂಪಾದ ಅಥವಾ ಉಗುರು ಬೆಚ್ಚಗಿನ ನೀರನ್ನೇ ಆಯ್ದುಕೊಳ್ಳಿ. ಸೌಮ್ಯವಾದ ಶಾಂಪೂ ಬಳಸಿ.

ಇದು ನೆತ್ತಿಯಲ್ಲಿ ರಕ್ತಪರಿಚನೆಯನ್ನು ಸುಧಾರಿಸುತ್ತದೆ. ಕೂದಲಿನ ಕಿರುಚೀಲಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ಕೂದಲ ಬೆಳವಣಿಗೆಗೆ ಅತ್ಯಗತ್ಯವಾದ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೂದಲ ತುದಿ ಇಬ್ಭಾಗವಾಗುವುದನ್ನು ತಡೆಯುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...