Kannada Duniya

ಮೇಕಪ್ ಮಾಡುವ ಮೊದಲು ನಟಿಯರು ಮುಖಕ್ಕೆ ಇದನ್ನು ಬಳಸುತ್ತಾರಂತೆ

ನಟಿಯರು ಮೇಕಪ್ ಇಲ್ಲದೇ ಹೊರಗಡೆ ಬರುಬಿದಲ್ಲ. ಹಾಗೇ ಅವರು ಮುಖಕ್ಕೆ ಹಚ್ಚಿದ ಮೇಕಪ್ ತುಂಬಾ ಹೊತ್ತಾದರೂ ಹಾಳಾಡುವುದಿಲ್ಲ. ಹಾಗಾಗಿ ನಟಿಯರು ಮುಖಕ್ಕೆ ಹೇಗೆ ಮೇಕಪ್ ಮಾಡುತ್ತಾರೆ ಎಂಬ ಕುತೂಹಲ ಹಲವರಿಗಿದೆ. ಹಾಗಾಗಿ ಈ ಬಗ್ಗೆ ತಿಳಿದುಕೊಳ್ಳಿ.

ನಟಿಯರು ಮುಖಕ್ಕೆ ಮೇಕಪ್ ಹಚ್ಚವ ಮುನ್ನ ಮುಖವನ್ನು ಐಸ್ ನೀರಿನಿಂದ ಮಸಾಜ್ ಮಾಡುತ್ತಾರಂತೆ. ಯಾಕೆಂದರೆ ಇದು ಮುಖದ ಚರ್ಮದ ಊತವನ್ನು ಕಡಿಮೆ ಮಾಡುತ್ತದೆಯಂತೆ. ಇದು ಮುಖವನ್ನು ತಂಪಾಗಿಸುತ್ತದೆಯಂತೆ. ಇದರಿಂದ ಮುಖಕ್ಕೆ ಮೇಕಪ್ ಚೆನ್ನಾಗಿ ಹಿಡಿಯುತ್ತದೆಯಂತೆ.

ಅಲ್ಲದೇ ಚರ್ಮದ ರಂಧ್ರಗಳನ್ನು ತೆರೆಯುವಂತೆ ಮಾಡುತ್ತದೆ. ಇದರಿಂದ ಚರ್ಮ ಮೇಕಪ್ ಅನ್ನು ಹೀರಿಕೊಂಡು ದೀರ್ಘಕಾಲ ಇರುವಂತೆ ಮಾಡುತ್ತದೆಯಂತೆ.

ಅಷ್ಟೇ ಅಲ್ಲದೇ ಐಸ್ ಮಸಾಜ್ ನಿಂದ ಮುಖದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ. ಇದರಿಂದ ಮುಖದ ಬಣ್ಣ ನೈಸರ್ಗಿಕವಾಗಿ ಕೆಂಪಾಗುತ್ತದೆಯಂತೆ. ಇದು ಮುಖಕ್ಕೆ ತಾಜಾ ಹೊಳಪನ್ನು ನೀಡುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...