Kannada Duniya

ಒಣ ಕೂದಲಿನ ಸಮಸ್ಯೆಗೆ ಈ ಬೀಜದ ಹೇರ್ ಪ್ಯಾಕ್ ಹಚ್ಚಿ

ವಾತಾವರಣದಲ್ಲಿ ಶುಷ್ಕಗಾಳಿ ಇದ್ದಾಗ ನಮ್ಮ ಚರ್ಮ ಮಾತ್ರವಲ್ಲ ಕೂದಲು ಕೂಡ ಒಣಗುತ್ತದೆ. ಇದರಿಂದ ಕೂದಲಿನ ಅಂದ ಕೆಡುತ್ತದೆ. ಹಾಗಾಗಿ ಈ ಒಣಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಈ ಬೀಜಗಳ ಹೇರ್ ಪ್ಯಾಕ್ ಬಳಸಿ.

ಅಗಸೆ ಬೀಜದಲ್ಲಿ ಹಲವು ಪೋಷಕಾಂಶಗಳಿದ್ದು, ಇದು ಕೂದಲನ್ನು ಪೋಷಿಸುತ್ತದೆ. ಕೂದಲಿನ ಬುಡವನ್ನು ಗಟ್ಟಿಗೊಳಿಸುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ಕಾಡುವುದಿಲ್ಲ. ಅಲ್ಲದೇ ಇದು ಕೂದಲಿನ ತೇವಾಂಶವನ್ನು ಕಾಪಾಡುತ್ತದೆ. ಇದರಿಂದ ಒಣಕೂದಲಿನ ಸಮಸ್ಯೆ ಕಾಡುವುದಿಲ್ಲ.

ಹಾಗಾಗಿ ಅಗಸೆ ಬೀಜಗಳನ್ನು ನೀರಿನಲ್ಲಿ ನೆನೆಸಿಡಿ. ನಂತರ ಅದನ್ನು ಕುದಿಸಿ ಫಿಲ್ಟರ್ ಮಾಡಿ. ಅದರ ಜೆಲ್ ಗೆ 4-5 ವಿಟಮಿನ್ ಇ ಕ್ಯಾಪ್ಸುಲ್ , ಸ್ವಲ್ಪ ಬಾದಾಮಿ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಕೂದಲಿಗೆ ಹಚ್ಚಿ. ಒಂದು ಗಂಟೆ ಬಿಟ್ಟು ಕೂದಲನ್ನು ತೊಳೆಯಿರಿ. ಇದನ್ನು ವಾರದಲ್ಲಿ 2 ಬಾರಿ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...