Kannada Duniya

Flowers for skin beauty :ಮದುವೆಯ ದಿನ ನಿಮ್ಮ ಸೌಂದರ್ಯ ಹೆಚ್ಚಿಸಲು ಈ ಕೆಲಸ ಮಾಡಿ

ಮದುವೆಯ ದಿನ ಮುಖದ ಸೌಂದರ್ಯ ಹೆಚ್ಚಾಗಬೇಕು ಎಂದು ಎಲ್ಲಾ ಹುಡುಗಿಯರು ಬಯಸುತ್ತಾರೆ. ಅದಕ್ಕಾಗಿ ನೀವು ರಾಸಾಯನಿಕಯುಕ್ತ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಇದರಿಂದ ಚರ್ಮಕ್ಕೆ ಹಾನಿಯಾಗಿ ಸೌಂದರ್ಯ ಹಾಳಾಗುವ ಸಂಭವವಿರುತ್ತದೆ. ಹಾಗಾಗಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಈ ಹೂಗಳನ್ನು ಬಳಸಿ.

 

ಗುಲಾಬಿ : ಈ ಹೂಗಳನ್ನು ಒಣಗಿಸಿ ಪುಡಿ ಮಾಡಿ ಸ್ಕ್ರಬ್ ಆಗಿ ಬಳಸಿ. ಇದರಿಂದ ನಿಮ್ಮ ಮುಖ ಕೆಂಪಾಗಿ ಹೊಳೆಯುತ್ತದೆ. ಮತ್ತು ರೋಸ್ ವಾಟರ್ ಅನ್ನು ಕೂಡ ಬಳಸಬಹುದು. ಇದು ನಿಮ್ಮ ಚರ್ಮದ ಪಿಎಚ್ ಅನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

 

ಕ್ಯಾಮೊಮೈಲ್ : ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಇದು ಚರ್ಮದ ಉರಿಯನ್ನು ಕಡಿಮೆ ಮಾಡಿ ಚರ್ಮವನ್ನು ತಂಪಾಗಿಸುತ್ತದೆ. ಹಾಗಾಗಿ ಕ್ಯಾಮೊಮೈಲ್ ನಿಂದ ಟೀ ತಯಾರಿಸಿ ಅದನ್ನು ಫೇಸ್ ಮಾಸ್ಕ್ ತಯಾರಿಕೆಯಲ್ಲಿ ಬಳಸಿ. ಇದನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

 

ಬೇರೆಯವರೊಡನೆ ಸಂಬಂಧವನ್ನು ಹೊಂದಲು ಬಯಸಿದ್ದರೆ ಈ ವಿಚಾರಗಳ ಬಗ್ಗೆ ತಿಳಿದಿರಲಿ

 

ಲ್ಯಾವೆಂಡರ್ : ನೀವು ಕೆಲಸದ ಒತ್ತಡದಿಂದ ಬಳಲುತ್ತಿದ್ದರೆ ಅದರ ಪರಿಣಾಮ ಮುಖದ ಚರ್ಮದ ಮೇಲೆ ಕಂಡುಬರುತ್ತದೆ. ಹಾಗಾಗಿ ನಿಮ್ಮ ಚರ್ಮವನ್ನು ಕಾಂತಿಯುತಗೊಳಿಸಲು ಲ್ಯಾವೆಂಡರ್ ಆಯಿಲ್ ಅನ್ನು ಬಳಸಬಹುದು. ಹಾಗೇ ಇದು ತಲೆಹೊಟ್ಟು ಮತ್ತು ಕೂದಲಿನ ಇತರ ಸಮಸ್ಯೆಗಳನ್ನು ನಿವಾರಿಸುತ್ತದೆ.

 

Use flowers to get beautiful skin


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...