Kannada Duniya

ದಾಳಿಂಬೆ ಸಿಪ್ಪೆಯ ಫೇಸ್ ಪ್ಯಾಕ್ ಪ್ರಯತ್ನಿಸಿ ನೋಡಿ!

ಪ್ರತಿ ಬಾರಿ ಫೇಸ್ ಪ್ಯಾಕ್ ಗೆಂದು ಮಾರುಕಟ್ಟೆಯಲ್ಲಿ ಸಿಗುವ ಕೃತಕ ಹಣ್ಣುಗಳ ಫೇಸ್ ಪ್ಯಾಕ್ ಅನ್ನು ಟ್ರೈ ಮಾಡುವ ಬದಲು ಮನೆಯಲ್ಲೇ ತಿಂದು ಎಸೆಯುವ ದಾಳಿಂಬೆ ಹಣ್ಣಿನ ಸಿಪ್ಪೆಯ ಫೇಸ್ ಮಾಸ್ಕ್ ಮಾಡಿ ನೋಡಿ. ಇದರಿಂದ ನಿಮ್ಮ ಮುಖದ ಸೌಂದರ್ಯವನ್ನು ಮತ್ತೆ ಪಡೆಯಿರಿ!

ದಾಳಿಂಬೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ. ನುಣ್ಣಗೆ ಪೌಡರ್ ರೀತಿ ಮಾಡಿಕೊಳ್ಳಿ. ಇದರಲ್ಲಿ ಎರಡು ಚಮಚದಷ್ಟು ಪೌಡರ್ ಗೆ ಸ್ವಲ್ಪ ಹಾಲು ಹಾಕಿ ಮಿಶ್ರಣ ಮಾಡಿಕೊಂಡು ಪೇಸ್ಟ್ ರೂಪಕ್ಕೆ ತನ್ನಿ.

ಇದನ್ನು ಬೆರಳುಗಳ ಸಹಾಯದಿಂದ ಮುಖಕ್ಕೆ ಹಚ್ಚಿ ವೃತ್ತಾಕಾರಕ್ಕೆ ಮಸಾಜ್ ಮಾಡುತ್ತಾ ಬನ್ನಿ. ಅರ್ಧಗಂಟೆ ಒಣಗಲು ಬಿಡಿ, ಬಳಿಕ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ. ವಾರಕ್ಕೆರಡರಿಂದ ಮೂರು ಬಾರಿ ಹೀಗೆ ಮಾಡುತ್ತಾ ಬಂದರೆ ನಿಮ್ಮ ತ್ವಚೆಗೆ ಅತ್ಯುತ್ತಮ ಪೋಷಣೆ ದೊರೆಯುತ್ತದೆ.

ಇದು ಮುಖದ ಮೇಲಿರುವ ಸುಕ್ಕು ಹಾಗೂ ನೆರಿಗೆಗಳನ್ನು ದೂರಮಾಡುತ್ತದೆ. ಕಪ್ಪು ಕಲೆ ಹಾಗೂ ಮೊಡವೆಗಳನ್ನು ನಿವಾರಿಸುತ್ತದೆ. ಸೌಂದರ್ಯ ವೃದ್ಧಿಸುವುದರ ಜೊತೆಗೆ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...