Kannada Duniya

ಕೂದಲಿಗೆ ಬಣ್ಣ ಮಾಡಿದ ಬಳಿಕ ಶಾಂಪೂ ಮಾಡಬಹುದೇ?

ಕೆಲವರಿಗೆ ವಯಸ್ಸಾಗುವ ಮುನ್ನವೇ ಕೂದಲು ಬೆಳ್ಳಗಾಗುತ್ತದೆ. ಅಂತವರು ಕೂದಲಿಗೆ ಬಣ್ಣವನ್ನು ಹಚ್ಚುತ್ತಾರೆ. ಆದರೆ ಕೂದಲಿಗೆ ಬಣ್ಣ ಹಚ್ಚಿದ ಬಳಿಕ ಕೂದಲನ್ನು ಶಾಂಪೂ ಬಳಸಿ ತೊಳೆಯಬಹುದೇ? ಇಲ್ಲವೇ? ಎಂಬುದನ್ನು ತಿಳಿಯಿರಿ.

ಕೂದಲಿಗೆ ಬಣ್ಣ ಮಾಡಿದ ಬಳಿಕ ಶಾಂಪೂ ಬಳಸಿ ತೊಳೆಯಬೇಡಿ. ಇದರಿಂದ ಬಣ್ಣವನ್ನು ಕೂದಲಿನ ಹೊರಪದರವು ಲಾಕ್ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ಬಣ್ಣ ಬೇಗನೆ ಹೋಗುತ್ತದೆ. ಹಾಗಾಗಿ ಕೂದಲಿಗೆ 3 ದಿನಗಳ ನಂತರ ಶಾಂಪೂ ಬಳಸಿ ತೊಳೆದರೆ ಒಳ್ಳೆಯದು.

ಹಾಗೇ ಕೂದಲನ್ನು ತೊಳೆಯುವ ಸಲ್ಫೇಟ್ ಮುಕ್ತ ಶಾಂಪೂ ಬಳಸಿ ತೊಳೆಯಿರಿ. ಹಾಗೇ ಕೂದಲಿಗೆ ಬಿಸಿ ನೀರನ್ನು ಬಳಸಬೇಡಿ. ಇದರಿಂದ ಕೂದಲು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಹಾಗೇ ಕೂದಲನ್ನು ತೊಳೆದ ಬಳಿಕ ಕಂಡೀಷನರ್ ಬಳಸುವುದನ್ನು ತಪ್ಪಿಸಬೇಡಿ. ಹಾಗೇ ಕೂದಲಿಗೆ ಹೇರ್ ಡ್ರೈಯರ್ ಅನ್ನು ಬಳಸಬೇಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...