Kannada Duniya

ನೀವು ಕಲೆರಹಿತವಾದ ಹೊಳೆಯುವ ತ್ವಚೆಯನ್ನು ಪಡೆಯಲು ಬೆಳಿಗ್ಗೆ ಮತ್ತು ರಾತ್ರಿ ಈ ಕೆಲಸ ಮಾಡಿ

ಪ್ರತಿಯೊಬ್ಬರು ತಮ್ಮ ಮುಖದ ಚರ್ಮ ಕಲೆರಹಿತವಾಗಿರಬೇಕು. ಅಂದವಾಗಿ ಹೊಳೆಯುತ್ತಿರಬೇಕೆಂದು ಬಯಸುತ್ತಾರೆ. ಆದರೆ ಅದಕ್ಕಾಗಿ ರಾಸಾಯನಿಕಯುಕ್ತ ಕ್ರೀಂಗಳನ್ನು ಹಚ್ಚುವ ಬದಲು ಬೆಳಿಗ್ಗೆ ಮತ್ತು ಸಂಜೆ ಈ ಕೆಲಸ ಮಾಡಿ.

ನಿಮ್ಮ ಚರ್ಮ ಯಾವಾಗಲೂ ಹೊಳೆಯುತ್ತಿರಲು ಮತ್ತು ಕಲೆರಹಿತವಾಗಿರಲು ಪ್ರತಿದಿನ ಬೆಳಿಗ್ಗೆ ಅಲೋವೆರಾ ರಸವನ್ನು ಉಗುರು ಬೆಚ್ಚಗಿರುವ ನೀರಿನಲ್ಲಿ ಮಿಕ್ಸ್ ಮಾಡಿ ಕುಡಿಯಿರಿ. ಹಾಗೇ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ನೆನೆಸಿದ ನೀರನ್ನು ಕುಡಿಯಿರಿ. ಹಾಗೇ ರಾತ್ರಿ ಮಲಗುವಾಗ ಮುಖವನ್ನು ತೊಳೆದು ಮಾಯಿಶ್ಚರೈಸರ್ ಹಚ್ಚಿ ಮಲಗಿ.

ಅಲ್ಲದೇ ಅಕ್ಕಿಹಿಟ್ಟು, ತುಳಸಿ ಎಲೆ , ಅರಿಶಿನ ಮತ್ತು ರೋಸ್ ವಾಟರ್ ಅನ್ನು ಮಿಕ್ಸ್ ಮಾಡಿ ಫೇಸ್ ಪ್ಯಾಕ್ ತಯಾರಿಸಿ ಬೆಳಿಗ್ಗೆ ಮುಖಕ್ಕೆ ಹಚ್ಚಿ. ಒಣಗಿದ ಬಳಿಕ ತೊಳೆಯಿರಿ. ಹಾಗೇ ರಾತ್ರಿ ಮಲಗುವ ಮುನ್ನ ಹಸಿ ಹಾಲು, ಅಲೋವೆರಾ, ಟೊಮೆಟೊ ರಸ, ಮತ್ತು ಮುಲ್ತಾನಿ ಮಿಟ್ಟಿ ಸೇರಿಸಿ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ . ಇದನ್ನು ವಾರದಲ್ಲಿ 3 ಬಾರಿ ಮಾಡಿದರೆ ಕಲೆಗಳು ಮಾಯವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...