Kannada Duniya

ಉಗುರಿನ ಫ್ಯಾಶನ್ ಕ್ರೇಜ್ ಇರುವವರು ಇದನ್ನು ಮರೆಯದಿರಿ!

ಹಲವರು ಉಗುರಿನ ಬಗ್ಗೆ ತೀರ ಕಾಳಜಿ ವ್ಯಕ್ತಪಡಿಸುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಉಗುರಿನ ಆರೈಕೆ ಮಾಡುವಾಗ ನೀವು ಮಾಡುವ ಕೆಲವು
ತಪ್ಪುಗಳು ಉಗುರಿಗೆ ಹಾನಿ ಉಂಟು ಮಾಡಬಹುದು. ಅವುಗಳ ಬಗ್ಗೆ ತಿಳಿಯೋಣ.

ಮೊದಲಿಗೆ ಉಗುರುಗಳನ್ನು ಕತ್ತರಿಸಿದ ಬಳಿಕ ಅವು ಒಣಗುವುದನ್ನು ಅಥವಾ ನಿರ್ಜೀವವಾಗುವುದನ್ನು ತಡೆಗಟ್ಟಲು ಅದನ್ನು ತೇವಗೊಳಿಸುವುದು ಮುಖ್ಯ.
ಹಾಗಾಗಿ ಉಗುರುಗಳನ್ನು ಕತ್ತರಿಸಿದ ತಕ್ಷಣ ಮಾಯಿಶ್ಚರೈಸರ್ ಹಚ್ಚಲು ಮರೆಯದಿರಿ.

ಒಣ ಉಗುರುಗಳನ್ನು ನೇರವಾಗಿ ಕತ್ತರಿಸದಿರಿ. ಇದು ಒಣಗಿರುತ್ತದೆ ಹಾಗೂ ಕತ್ತರಿಸುವಾಗ ನಿಮಗೆ ನೋವುಂಟು ಮಾಡುತ್ತದೆ. ಸ್ವಲ್ಪ ಹೊತ್ತು ಉಗುರು ಬೆಚ್ಚಗಿನ ನೀರಿನಲ್ಲಿ ಕೈಯನ್ನು ಅದ್ದಿ ಇಟ್ಟು ಉಗುರು ತೆಗೆಯಿರಿ ಅಥವಾ ಸ್ನಾನವಾದ ಬಳಿಕ ಉಗುರು ಕತ್ತರಿಸಿ.

ಮಹಿಳೆಯರು ಉಗುರುಗಳಿಗೆ ವಿಭಿನ್ನವಾದ ಆಕಾರಗಳನ್ನು ನೀಡಲು ಬಯಸುತ್ತಾರೆ. ಹೀಗೆ ಮಾಡುವುದರಿಂದ ಉಗುರು ಬಲು ಬೇಗ ದುರ್ಬಲಗೊಳ್ಳುತ್ತದೆ
ಹಾಗೂ ಮುರಿಯುತ್ತದೆ. ಅದನ್ನು ತಪ್ಪಿಸಲು ನೀವು ಉಗುರುಗಳನ್ನು ದುಂಡಗಿನ ಆಕಾರಕ್ಕೆ ಕತ್ತರಿಸಿ. ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಲಭ್ಯವಿರುವ ಎಕ್ಸ್ಟೆಂಶನ್ ಬಳಸುವುದು ಕೂಡ ಒಳ್ಳೆಯದಲ್ಲ.

ಉಡುಪಿಗೆ ತೆಕ್ಕದಾದ ನೇಲ್ ಪಾಲೀಷ್ ಹಚ್ಚಿಕೊಳ್ಳುವ ನೆಪದಲ್ಲಿ ಪ್ರತಿ ಬಾರಿ ರಿಮೂವರನ್ನು ಬಳಸುವುದು ಕೂಡ ಒಳ್ಳೆಯದಲ್ಲ. ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...