Kannada Duniya

ವೈಟ್ಸ್ ಹೆಡ್ಸ್ ಗೆ ಈ ಟಿಪ್ಸ್ ಅನುಸರಿಸಿ ನೋಡಿ!

ಎಲ್ಲಾ ವಯೋಮಾನದವರನ್ನು ಅದರಲ್ಲೂ ಹೆಚ್ಚಾಗಿ ಯುವಕ ಯುವತಿಯರನ್ನು ಕಾಡುವ ವೈಟ್ ಹೆಡ್ ಸಮಸ್ಯೆಯನ್ನು ಪರಿಹರಿಸಲು ನೀವು ಈ ಕೆಲವು
ಟಿಪ್ಸ್ ಗಳನ್ನು ಅನುಸರಿಸಿ.ಇದರಿಂದ ನಿಮ್ಮ ಸೌಂದರ್ಯವನ್ನು ಹಾಳು ಮಾಡುವ ವೈಟ್ ಹೆಡ್ ಅನ್ನು  ಸುಲಭವಾಗಿ ನಿವಾರಿಸಬಹುದು.

ಮೃದುವಾದ ಕ್ಲೆನ್ಸರ್ ನೊಂದಿಗೆ ನಿಮ್ಮ ತ್ವಚೆಯನ್ನು ಸ್ವಚ್ಛಗೊಳಿಸಿ. ಮನೆಯಿಂದ ಹೊರಗೆ ಹೋಗಿ ಬಂದ ಮೇಲೆ ಸ್ವಚ್ಛವಾದ ನೀರಿನಿಂದ ಮುಖ ತೊಳೆಯುವುದನ್ನು ಮರೆಯದಿರಿ.

ನಿಯಮಿತವಾಗಿ ಎಕ್ಸ್ ಪೋಲಿಯೇಶನ್ ಮಾಡುವ ಮೂಲಕ ರಂಧ್ರಗಳನ್ನು ತೆರೆದು ಸತ್ತ ಜೀವದ ಕೋಶಗಳನ್ನು ಹೊರಹಾಕಬಹುದು. ಇದರ ನಿವಾರಣೆಗೆ ಮೆಡಿಕಲ್ ಗಳಲ್ಲಿ ಸಿಗುವ ಸ್ಕ್ರಬ್ ಬಳಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಮನೆಯಲ್ಲೇ ಮಾಡಬಹುದಾದ ಸರಳ ಸ್ಕ್ರಬ್ ಗಳನ್ನು ಬಳಸಿ. ಕಾಫಿ ಪುಡಿ ಹಾಗೂ ಸಕ್ಕರೆ ಬೆರೆಸಿದ ಸ್ಕ್ರಬ್ ಇದಕ್ಕೆ ಅತ್ಯುತ್ತಮ ಎನ್ನಲಾಗಿದೆ.

ಎಣ್ಣೆಯಂಶ ರಹಿತವಾದ ಮೇಕಪ್ ಬಳಸಿ. ನಿಮ್ಮ ತ್ವಚೆಯನ್ನು ತೇವಗೊಳಿಸಿ. ಅಂದರೆ ಸಾಕಷ್ಟು ಪ್ರಮಾಣದ ನೀರು ಕುಡಿಯಿರಿ. ಇದು ಅತಿಯಾದ ತೈಲ ಉತ್ಪಾದನೆಗೂ ಕಡಿವಾಣ ಹಾಕುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...