Kannada Duniya

ಹೊರಗಡೆ ವ್ಯಾಯಾಮ ಮಾಡಿ ಮುಖದಲ್ಲಿ ಮೊಡವೆಗಳ ಸಮಸ್ಯೆ ಕಾಡುತ್ತಿದ್ದರೆ ಈ ಸಲಹೆ ಪಾಲಿಸಿ

ಕೆಲವರು ದೇಹವನ್ನು ಫಿಟ್ ಆಗಿಸಲು ಹೊರಗಡೆ ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಹೊರಗಡೆ ಧೂಳು, ಕೊಳೆ ನಿಮ್ಮ ಚರ್ಮದ ಮೇಲೆ ಕುಳಿತು ಮೊಡವೆಗಳ ಸಮಸ್ಯೆಯನ್ನು ಉಂಟುಮಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಈ ಸಲಹೆ ಪಾಲಿಸಿ.

ವ್ಯಾಯಾಮ ಮಾಡುವಾಗ ಆಗಾಗ ಮುಖವನ್ನು ಮುಟ್ಟಬೇಡಿ. ಇದರಿಂದ ಕೈಯಲ್ಲಿರುವ ಬ್ಯಾಕ್ಟೀರಿಯಾಗಳು ಮುಖದಲ್ಲಿ ಮೊಡವೆಗಳನ್ನು ಉಂಟುಮಾಡುತ್ತದೆ.
ನೀವು ಹೊರಗಡೆ ವ್ಯಾಯಾಮ ಮಾಡುವಾಗ ಮುಖಕ್ಕೆ ಸನ್ ಸ್ಕ್ರೀನ್ ಬಳಸುವುದನ್ನು ತಪ್ಪಿಸಬೇಡಿ. ಇದು ಮುಖಕ್ಕೆ ಸೂರ್ಯನ ಬೆಳಕಿನಿಂದ ಹಾನಿಯಾಗುವುದನ್ನು ತಪ್ಪಿಸುವುದು ಮಾತ್ರವಲ್ಲ ಧೂಳು, ಮಾಲಿನ್ಯದಿಂದ ರಕ್ಷಣೆ ನೀಡುತ್ತದೆ.

ಹಾಗೇ ಹೊರಗಡೆ ವ್ಯಾಯಾಮದಿಂದ ಬಂದ ನಂತರ ತಕ್ಷಣ ಸ್ನಾನ ಮಾಡಿ. ಇದರಿಂದ ಚರ್ಮದಲ್ಲಿರುವ ಬೆವರು , ಕೊಳೆ, ಧೂಳು ನಿವಾರಣೆಯಾಗುತ್ತದೆ.
ಹಾಗೇ ಪ್ರತಿದಿನ ಸಾಕಷ್ಟು ನೀರನ್ನು ಕುಡಿಯಿರಿ. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...