Kannada Duniya

ಹೊಳೆಯುವ ಚರ್ಮವನ್ನು ಪಡೆಯಲು ಅನ್ನದ ಫೇಸ್ ಪ್ಯಾಕ್ ಬಳಸಿ

ಮಹಿಳೆಯರು ಚರ್ಮದ ಹೊಳಪನ್ನು ಪಡೆಯಲು ಬಯಸುತ್ತಾರೆ. ಅದಕ್ಕಾಗಿ ದುಬಾರಿ ಹಣವನ್ನು ಖರ್ಚು ಮಾಡಡುತ್ತಾರೆ. ಆದರೆ ಅಕ್ಕಿಯ ನೀರು, ಅಕ್ಕಿಹಿಟ್ಟನ್ನು ಬಳಸಿ ಚರ್ಮದ ಅಂದವನ್ನು ಹೆಚ್ಚಿಸಬಹುದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಬೇಯಿಸಿದ ಅನ್ನದಿಂದಲೂ ಕೂಡ ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸಬಹುದಂತೆ.

ಅದಕ್ಕಾಗಿ ಬೇಯಿಸಿದ ಅನ್ನವನ್ನು ತೆಗೆದುಕೊಂಡು ಅದಕ್ಕೆ ಹಾಲು ಸೇರಿಸಿ ರುಬ್ಬಿಕೊಳ್ಳಿ ನಂತರ ಅದಕ್ಕೆ ಜೇನುತುಪ್ಪವನ್ನು ಮಿಕ್ಸ್ ಮಾಡಿ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ. ಇದನ್ನು ವಾರದಲ್ಲಿ 2 ಬಾರಿ ಮಾಡಿದರೆ ಚರ್ಮದ ಹೊಳಪು ಹೆಚ್ಚಾಗುತ್ತದೆ.

ಹಾಗೇ ಎಣ್ಣೆಯುಕ್ತ ಚರ್ಮದ ಸಮಸ್ಯೆಯನ್ನು ಹೋಗಲಾಡಿಸಲು ಅನ್ನವನ್ನು ರುಬ್ಬಿ ಅದಕ್ಕೆ ನಿಂಬೆರಸ ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ. ಇದು ಎಣ್ಣೆಯುಕ್ತ ಚರ್ಮ ಹೊಂದಿರುವವರಿಗೆ ಒಳ್ಳೆಯದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...