Kannada Duniya

ಮ್ಯಾಟ್ ನೇಲ್ ಪೇಂಟ್ ಅನ್ನು ಹೀಗೆ ತಯಾರಿಸಿ…..!

ಸಾಮಾನ್ಯ ಹುಡುಗಿಯರು ಹೊಳೆಯುವ ಮತ್ತು ಮ್ಯಾಟ್ ನೇಲ್ ಪಾಲಿಶ್ ಅನ್ನು ಬಳಸುತ್ತಾರೆ. ಆದರೆ ಕೆಲವರ ಬಳಿ ಮ್ಯಾಟ್ ನೇಲ್ ಪಾಲಿಶ್ ಇರುವುದಿಲ್ಲ. ಅಂತವರು ಬೇಸರ ಪಡುವ ಬದಲು ಸರಳವಾದ ನೈಲ್ ಪಾಲಿಶ್ ನಿಂದ ಮ್ಯಾಟ್ ಲುಕ್ ನೈಲ್ ಪಾಲಿಶ್ ಅನ್ನು ತಯಾರಿಸಬಹುದು.

ಮೊದಲನೇಯದಾಗಿ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಹಾಕಿ. ನಿಮ್ಮ ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚಿ ಅದನ್ನು ಬಿಸಿ ನೀರಿನಿಂದ ಹೊರಬರುತ್ತಿರುವ ಉಗಿಯಲ್ಲಿ ನಿಮ್ಮ ಉಗುರುಗಳನ್ನು ಇರಿಸಿ. ಸ್ವಲ್ಪ ಸಮಯದ ಬಳಿಕ ಉಗುರಿನ ಬಣ್ಣವು ಮ್ಯಾಟ್ ಬಣ್ಣಕ್ಕೆ ಬದಲಾಗುತ್ತದೆ.

ಮಕ್ಕಳಿಗೂ ನೈಲ್ ಪಾಲಿಶ್ ಹಚ್ಚುತ್ತೀರಾ? ಇದು ಸುರಕ್ಷಿತವೇ?

ಐಶಾಡೋ ಸಹಾಯದಿಂದ ನೀವು ಮ್ಯಾಟ್ ನೇಲ್ ಪೇಂಟ್ ಅನ್ನು ಸಹ ತಯಾರಿಸಬಹುದು. ನಿಮ್ಮ ಐಶಾಡೋ ಅವಧಿ ಮುಗಿದಿದ್ದರೆ ಅದನ್ನು ನುಣ್ಣಗೆ ಮಾಡಿ ಅದಕ್ಕೆ ಸ್ವಲ್ಪ ಟಾಲ್ಕಂ ಪೌಡರ್ ಸೇರಿಸಿ. ಬಳಿಕ ಅದಕ್ಕೆ ಸ್ವಲ್ಪ ಬೇಸ್ ನೇಲ್ ಪೇಂಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಮ್ಯಾಟ್ ನೇಲ್ ಪೇಂಟ್ ರೆಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...