Kannada Duniya

ಫಿಶ್ ಸ್ಪಾ ಮಾಡಿದರೆ ಈ ರೋಗಕ್ಕೆ ಬಲಿಯಾಗುತ್ತೀರಂತೆ

ಇಂದಿನ ಕಾಲದಲ್ಲಿ ಹೆಚ್ಚಿನ ಜನರು ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹಲವಾರು ಚಿಕಿತ್ಸೆಗಳನ್ನು ಮಾಡಿಕೊಳ್ಳುತ್ತಾರೆ. ಅದರಲ್ಲಿ ಫಿಶ್ ಸ್ಪಾ ಕೂಡ ಒಂದು. ಇದು ಪಾದಗಳನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಆದರೆ ಇದರಿಂದ ನೀವು ಗಂಭೀರ ರೋಗಗಳಿಗೆ ತುತ್ತಾಗುತ್ತೀರಂತೆ.

ಫಿಶ್ ಸ್ಪಾ ಮಾಡುವುದರಿಂದ ನೀವು ಸೋರಿಯಾಸಿಸ್ , ಎಸ್ಟಿಮಾನಂತಹ ಚರ್ಮ ರೋಗಕ್ಕೆ ಒಳಗಾಗುತ್ತೀರಂತೆ. ಯಾಕೆಂದರೆ ಈ ರೋಗವಿರುವ ವ್ಯಕ್ತಿಗೆ ಕಚ್ಚಿದ ಮೀನುಗಳು ನಿಮ್ಮನ್ನು ಕಚ್ಚಿದರೆ ಈ ರೋಗ ನಿಮಗೆ ಹರಡುತ್ತದೆಯಂತೆ.

ಅಲ್ಲದೇ ಈ ಮೀನುಗಳಲ್ಲಿ ಅನೇಕ ಬ್ಯಾಕ್ಟೀರಿಯಾಗಳಿರುತ್ತದೆ. ಇವುಗಳು ನಿಮ್ಮ ದೇಹವನ್ನು ಪ್ರವೇಶಿಸಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆಯಂತೆ.

ಅಲ್ಲದೇ ಫಿಶ್ ಸ್ಪಾ ಮಾಡುವುದರಿಂದ ಚರ್ಮದ ಟೋನ್ ಹಾಳಾಗುತ್ತದೆಯಂತೆ. ಮೀನುಗಳು ಕಚ್ಚುವುದರಿಂದ ಚರ್ಮ ಒರಟಾಗುತ್ತದೆಯಂತೆ. ಇದರಿಂದ ಚರ್ಮ ಕೆಡುತ್ತದೆ.

ಅಲ್ಲದೇ ಫಿಶ್ ಸ್ಪಾಯಿಂದ ಉಗುರುಗಳು ಹಾಳಾಗಬಹುದು. ಮೀನುಗಳು ಕಚ್ಚುವುದರಿಂದ ಈ ಸಮಸ್ಯೆ ಕಂಡುಬರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...