Kannada Duniya

ಬಿಳಿ ಕೂದಲನ್ನು ಎಳೆದು ತೆಗೆಯುವವರು ಒಮ್ಮೆ ಈ ವಿಚಾರ ತಿಳಿದಿರಿ

ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಹಜ. ಆದರೆ ಕೆಲವರು ತಮ್ಮ ಒತ್ತಡದ ಜೀವನಶೈಲಿಯಿಂದಾಗಿ ಕೂದಲು ವಯಸ್ಸಾಗುವ ಮುನ್ನವೇ ಬೆಳ್ಳಗಾಗುತ್ತದೆ. ಹಾಗಾಗಿ ಅಂತವರು ಬಿಳಿ ಕೂದಲನ್ನು ಮರೆಮಾಚಲು ಅದನ್ನು ಎಳೆದು ಕಿತ್ತು ತೆಗೆಯುತ್ತಾರೆ. ಆದರೆ ಇದರಿಂದ ಏನಾಗುತ್ತದೆ ಎಂಬುದನ್ನು ತಿಳಿಯಿರಿ.

ಕೂದಲನ್ನು ಎಳೆದು ತೆಗೆಯುವುದರಿಂದ ನೆತ್ತಿಯಲ್ಲಿ ತೀವ್ರವಾದ ತುರಿಕೆ, ಸುಡುವ ವೇದನೆ, ದದ್ದುಗಳು ಉಂಟಾಗಬಹುದು. ಇದರಿಂದ ಸೂಕ್ಷ್ಮ ಚರ್ಮ ಹೊಂದಿರುವವರಿಗೆ ತುಂಬಾ ಸಮಸ್ಯೆಯಾಗುತ್ತದೆ.

ಕೂದಲನ್ನು ಎಳೆದು ತೆಗೆಯುವುದರಿಂದ ನೆತ್ತಿಯಲ್ಲಿ ತೀವ್ರ ತುರಿಕೆ ಉಂಟಾಗಿ ಅದು ಸೋಂಕಿಗೆ ಕಾರಣವಾಗಬಹುದು. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಇದರಿಂದ ಗಂಭೀರ ಸಮಸ್ಯೆ ಕಾಡಬಹುದು.

ಬಿಳಿ ಕೂದಲನ್ನು ಎಳೆದು ತೆಗೆಯುವುದರಿಂದ ಕೂದಲಿನ ಬುಡ ದುರ್ಬಲವಾಗಬಹುದು. ಇದು ಬೇರೆ ಕೂದಲಿನ ಬೆಳವಣಿಗೆ ಮತ್ತು ರಚನೆಗಳ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ. ಇದರಿಂದ ಕೂದಲು ತೆಳ್ಳಗಾಗುವುದು ಮತ್ತು ಕೂದಲುದುರುವ ಸಮಸ್ಯೆ ಕಾಡಬಹುದು.

ಅಲ್ಲದೇ ನೀವು ಕೂದಲನ್ನು ಎಳೆದು ತೆಗೆದರೆ ಅಲ್ಲಿ ಹೊಸ ಕೂದಲು ಬೆಳೆಯುವುದಿಲ್ಲ. ಬದಲಾಗಿ ಆ ಸ್ಥಳದಲ್ಲಿ ಕಪ್ಪು ಕಲೆಗಳು ಮೂಡಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...