Kannada Duniya

ನಿಮ್ಮ ಹಳೆಯ ಜೀನ್ಸ್ ಪ್ಯಾಂಟ್ ಅನ್ನು ಯಾವ ರೀತಿ ಬಳಸಬಹುದು ಗೊತ್ತಾ…?

ವಯಸ್ಸಿನ ಹಾಗೂ ಲಿಂಗ ಭೇದವಿಲ್ಲದೆ ಪ್ರತಿಯೊಬ್ಬರೂ ತೊಡುವ ಉಡುಪುಗಳಲ್ಲಿ ಜೀನ್ಸ್ ಕೂಡ ಒಂದು. ಇದು ಹಳೆಯದಾಯಿತು ಎಂದು ಎಸೆಯುವ ಮುನ್ನ ಯಾವ ರೀತಿ ಮರುಬಳಕೆ ಮಾಡಬಹುದು ಎಂಬುದರ ಬಗ್ಗೆ ತಿಳಿಯಿರಿ.
ಪ್ಯಾಂಟ್ ಟೈಟ್ ಆಗಿದೆ ಎಂದು ಎಸೆಯುವ ಬದಲು ಅದಕ್ಕೆ ಸ್ವಲ್ಪ ಹೊತ್ತು ಬಿಸಿ ನೀರನ್ನು ಸ್ಪ್ರೇ ಮಾಡಿ ಹ್ಯಾಂಗರ್ ನಲ್ಲಿ ನೇತು ಹಾಕಿ. ಅರ್ಧ ಗಂಟೆ ಬಳಿಕ ಧರಿಸಿ ನೋಡಿ. ಆಗಲೂ ಟೈಟ್ ಆಗುತ್ತಿದ್ದರೆ ಮತ್ತೆ ಇದೇ ಟ್ರಿಕ್ ಅನ್ನು ಪುನರಾವರ್ತಿಸಿ. ಈಗ ಪ್ಯಾಂಟ್ ಸ್ವಲ್ಪವಾದರೂ ಲೂಸ್ ಆಗೋದು ಖಂಡಿತ.

ಇನ್ನು ಜೀನ್ಸ್ ಬಣ್ಣ ಕಳೆದುಕೊಂಡಿದ್ದರೆ ನಿಮಗಿಷ್ಟ ಇರುವ ಬಣ್ಣವನ್ನು ನೀವು ಮನೆಯಲ್ಲಿ ಹಾಕಬಹುದು. ಮಾರುಕಟ್ಟೆಯಲ್ಲಿ ಸಿಗುವ ಬಣ್ಣವನ್ನು ತಂದು ಬಿಸಿ ನೀರಿನಲ್ಲಿ ಕಲಸಿ ಪ್ಯಾಂಟನ್ನು ಅರ್ಧ ಗಂಟೆ ನೆನೆಸಿಡಿ. ಬಳಿಕ ಒಣ ಹಾಕಿ. ನಿಮ್ಮ ಪ್ಯಾಂಟ್ ಹೊಸ ಬಣ್ಣ ಪಡೆದುಕೊಂಡು ಕಲರ್ ಫುಲ್ ಆಗಿ ಮಿಂಚುತ್ತದೆ.

Room colors: ವಾಸ್ತು ಪ್ರಕಾರ ಮನೆಯ ಯಾವ ಕೋಣೆಯಲ್ಲಿ ಯಾವ ಬಣ್ಣವಿದ್ದರೆ ಒಳ್ಳೆಯದು…!

ಗಿಡ್ಡ ಪ್ಯಾಂಟ್ ಹಾಕೋದು ಕೂಡ ಸ್ಟೈಲಿ ಎಂಬುದನ್ನು ಮರೆಯದಿರಿ. ಅಲ್ಲಲ್ಲಿ ಹರಿದಿದ್ದರೂ ಯಾವುದೇ ನಾಚಿಕೆ ಇಲ್ಲದೆ ಅದನ್ನು ಧರಿಸಬಹುದು. ಅದೇ ರೀತಿ ಯೂಟ್ಯೂಬ್ ನೆರವಿನಿಂದ ಪ್ಯಾಂಟ್ ಗಳ ಬ್ಯಾಗ್ ತಯಾರಿಸುವುದು ಹೇಗೆಂದು ನೋಡಿ ಕಲಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...