Kannada Duniya

ಕೂದಲಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಇಲ್ಲಿವೆ ಕೆಲ ಸಲಹೆಗಳು…!

ಆಧುನಿಕ ಜೀವನಶೈಲಿಯಿಂದಾಗಿ ಅನೇಕ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಕೆಟ್ಟ ಆಹಾರ ಪದ್ಧತಿಯಿಂದ ಆರೋಗ್ಯದ ಜೊತೆಗೆ ಕೂದಲಿನ ಸಮಸ್ಯೆಯ ಮೇಲೂ ಪರಿಣಾಮ ಬೀರುತ್ತಿದೆ.

ಕೆಲವು ಜನರಲ್ಲಿ ಮಾಲಿನ್ಯದಿಂದಾಗಿ ಸಹ ಕೂದಲಿನ ಸಮಸ್ಯೆಗಳು ಉಂಟಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದ್ದರಿಂದ ಅಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಯಾವ ರೀತಿ ಸಲಹೆಗಳನ್ನು ಅನುಸರಿಸಬೇಕು ಎಂಬುದು ತಿಳಿದುಕೊಳ್ಳೊಣ

ನಿಮ್ಮ ಕೂದಲನ್ನು ಆರೋಗ್ಯಕರವಾಗಿಡಲು ಏನು ಮಾಡಬೇಕು ಎಂದು ನಿಮಗೆ ತಿಳಿದಿದೆಯೇ?:

ಅಗಸೆ ಬೀಜಗಳು: ಕೂದಲಿನ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅಗಸೆ ಬೀಜಗಳು ಸೇವಿಸುವುದರಿಂದ ಅನೇಕ ಪ್ರಯೋಜನೆಗಳಿವೆ. ಇದು ಹೆಚ್ಚಿನ ಪ್ರಮಾಣದ ಫೈಬರ್, ಪ್ರೋಟೀನ್‌ ಗಳು, ಜೀವಸತ್ವಗಳು, ಖನಿಜಗಳನ್ನು ಹೊಂದಿರುತ್ತದೆ. ಆದ್ದರಿಂದ ಪ್ರತಿದಿನ ಅಗಸೆಬೀಜದ ನೀರನ್ನು ಕುಡಿಯುವುದರಿಂದ ಕೂದಲು ವೃದ್ಧಿಯಾಗುತ್ತದೆ.

ಕರಿಬೇವಿನ ಎಲೆಗಳು: ಕರಿಬೇವಿನ ಎಲೆಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಆಯುರ್ವೇದ ಗುಣಗಳು ದೇಹಕ್ಕೆ ಮಾತ್ರವಲ್ಲದೆ ಕೂದಲಿಗೂ ಸಹ ಸಹಾಯಕವಾಗುತ್ತದೆ. ಈ ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಪ್ರೋಟೀನ್ ಗಳು ಸಮೃದ್ಧವಾಗಿವೆ. ಆರೋಗ್ಯ ತಜ್ಞರ ಪ್ರಕಾರ, ಅವುಗಳನ್ನು ಸೇವಿಸುವುದರಿಂದ ಕೂದಲು ಉದ್ದವಾಗುತ್ತದೆ . ಇದರಲ್ಲಿರುವ ಗುಣಲಕ್ಷಣಗಳು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.

ಈ ಅಭ್ಯಾಸಗಳು ತೂಕವನ್ನು ಕಡಿಮೆ ಮಾಡಲು ಅಡ್ಡಿಯಾಗಬಹುದು, ಇಂದೇ ಎಚ್ಚರದಿಂದಿರಿ….!

ನೆಲ್ಲಿಕಾಯಿ:ನೆಲ್ಲಿಕಾಯಿ ಅನೇಕ ಆಯುರ್ವೇದ ಗುಣಗಳನ್ನು ಹೊಂದಿದೆ. ಪ್ರತಿದಿನ ಅವುಗಳನ್ನು ಸೇವಿಸುವುದರಿಂದ ಕೂದಲು ಉದ್ದವಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದೆ. ಇದರಲ್ಲಿರುವ ಗುಣಲಕ್ಷಣಗಳು ಗಂಭೀರ ಆರೋಗ್ಯ ಸಮಸ್ಯೆಗಳಿಂದ ದೂರವಾಗುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...