Kannada Duniya

ಕಪ್ಪು ಕಲೆಯಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ….?ಇಲ್ಲಿದೆ ನೋಡಿ ಸುಲಭ ಮನೆ ಮದ್ದುಗಳು!

ಮುಖದ ಮೇಲೆ ಮೊಡವೆ ಹಾಗೂ ಇನ್ನೀತರ ಕಾರಣಗಳಿಂದ ಮುಖದಲ್ಲಿ ಕಪ್ಪು ಕಲೆಗಳು ಉಂಟಾಗುತ್ತದೆ. ಇದರಿಂದ ಹೊರಗಡೆ ಮುಖ ತೋರಿಸುವುದಕ್ಕೆ ಕೆಲವರು ಹಿಂಜರಿಯುತ್ತಾರೆ. ಇನ್ನು ಕೆಲವರು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಈ ಕಪ್ಪುಕಲೆಗಳನ್ನು ನಿವಾರಿಸಲು ಈ ಕೆಲವು ಮನೆಮದ್ದುಗಳನ್ನು ನೀವು ಪ್ರಯತ್ನಿಸಿ ನೋಡಿ.

ಟೊಮೆಟೊ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿದ್ದು ಇದು ನೈಸರ್ಗಿಕ ಹೊಳಪನ್ನು ಉತ್ತೇಜಿಸುತ್ತದೆ. ಇದರಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣಗಳಿದ್ದು ಅವು ಕಪ್ಪು ಕಲೆಗಳನ್ನು ಹೋಗಲಾಡಿಸುತ್ತವೆ. ಟೊಮೆಟೊವನ್ನು ಸ್ಲೈಸ್ ಮಾಡಿ ಕಲೆಗಳಿರುವ ಜಾಗಗಳಿಗೆ ಉಜ್ಜಿ. 15 ನಿಮಿಷ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ.

ಹಾಲು ಅಥವಾ ಜೇನುತುಪ್ಪದೊಂದಿಗೆ ಚಿಟಿಕೆ ಅರಿಶಿನ ಪುಡಿಯನ್ನು ಬೆರೆಸಿ ಪೇಸ್ಟ್ ತಯಾರಿಸಿ. ಕಲೆಗಳಿರುವ ಜಾಗಕ್ಕೆ ಹಚ್ಚಿ 20 ನಿಮಿಷ ಬಳಿಕ ತೊಳೆಯಿರಿ.
ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ನಾಲ್ಕು ಬಾರಿ ಇದನ್ನು ಪುನರಾವರ್ತಿಸಿ.

ನಿಂಬೆ ರಸವನ್ನು ಜೇನುತುಪ್ಪ ಅಥವಾ ಟೊಮ್ಯಾಟೋ ರಸದೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಮಾಡಿಕೊಳ್ಳಿ. 30 ನಿಮಿಷ ಬಳಿಕ ಮುಖ ತೊಳೆಯಿರಿ. ನಿಂಬೆ ರಸ ತ್ವಚೆಗೆ ನೈಸರ್ಗಿಕ ಬ್ಲೀಚ್ ಆಗಿ ಕೆಲಸ ಮಾಡುವುದರ ಜೊತೆಗೆ ಪಿಗ್ಮೆಂಟೇಷನ್ ಸಮಸ್ಯೆಯನ್ನು ದೂರ ಮಾಡುತ್ತದೆ. ಅಲೋವೆರಾದಿಂದಲೂ ಇದೇ ಲಾಭವನ್ನು ಪಡೆದುಕೊಳ್ಳಬಹುದು. ಅಲೋವೆರಾ ಜೆಲ್ ಅನ್ನು ರಾತ್ರಿ ಮುಖಕ್ಕೆ ಹಚ್ಚಿ ಬೆಳಿಗ್ಗೆ ನೀರಿನಿಂದ ಮುಖ ತೊಳೆದರೆ ಕಲೆಗಳು ಬಹುಬೇಗ ದೂರವಾಗುತ್ತವೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...