Kannada Duniya

ಎದೆಯ ಗಾತ್ರ ಹಚ್ಚಿರುವಂತಹ ಮಹಿಳೆಯರ ಸೀರೆಯ ರವಿಕೆ ಆಯ್ಕೆ ಹೀಗಿರಲಿ

ನೀವು ಸುಂದರವಾದ ಸೀರೆಯನ್ನು ಧರಿಸಿದ ಮಾತ್ರಕ್ಕೆ ಸುಂದರವಾಗಿ ಕಾಣುವುದಿಲ್ಲ. ಅದರ ರವಿಕೆ ಕೂಡ ಉತ್ತಮವಾಗಿರಬೇಕು. ಇದು ನಿಮ್ಮ ಲುಕ್ ಅನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಆದರೆ ಕೆಲವು ಮಹಿಳೆಯರಲ್ಲಿ ಎದೆಯ ಗಾತ್ರ ದೊಡ್ಡದಾಗಿರುತ್ತದೆ. ಅಂತವರು ತಾವು ಧರಿಸುವ ರವಿಕೆಯ ಬಗ್ಗೆ ಹೆಚ್ಚು ಗಮನಕೊಡಬೇಕು. ಇಲ್ಲವಾದರೆ ಅವರ ದೇಹದ ಆಕಾರ ಕೆಡುತ್ತದೆ. ಹಾಗಾಗಿ ಎದೆಯ ಗಾತ್ರ ಹಚ್ಚಿರುವಂತಹ ಮಹಿಳೆಯರ ಸೀರೆಯ ರವಿಕೆ ಆಯ್ಕೆ ಹೀಗಿರಲಿ.

ಎದೆಯ ಗಾತ್ರ ಹಚ್ಚಿರುವಂತಹ ಮಹಿಳೆಯರ ಸೀರೆ ಮತ್ತು ರವಿಕೆ ಒಂದೆ ಬಣ್ಣದಲ್ಲಿದ್ದರೆ ಒಳ್ಳೆಯದು. ಯಾಕೆಂದರೆ ಇದು ನಿಮ್ಮ ಎದೆಯ ಗಾತ್ರವನ್ನು ಹೈಲೈಟ್ ಮಾಡುವುದಿಲ್ಲ. ಇದರಿಂದ ನಿಮ್ಮ ದೇಹದ ಆಕಾರ ಒಂದೇ ರೀತಿಯಾಗಿ ಕಾಣುತ್ತದೆ.

ಈ ಮಹಿಳೆಯರು ಅತಿಯಾಗಿ ಅಲಂಕಾರ ಮಾಡಿರುವಂತಹ, ಹೆಚ್ಚು ವರ್ಕ್ ಇರುವಂತಹ ಮತ್ತು ಕಾಂಟ್ರಾಸ್ಟ್ ಬಣ್ಣದ ರವಿಕೆಯನ್ನು ಆಯ್ಕೆ ಮಾಡಬೇಡಿ. ನೀವು ಸಿಂಪಲ್ಲಾದ ರವಿಕೆಯನ್ನು ಧರಿಸಿದರೆ ಒಳ್ಳೆಯದು.

ಎದೆಯ ಗಾತ್ರ ಹಚ್ಚಿರುವಂತಹ ಮಹಿಳೆಯರು ರವಿಕೆಯ ಸ್ಲೀವ್ ಬಗ್ಗೆ ಗಮನಕೊಡಿ. ನೀವು ಮೊಣಕೈ ತನಕ ಬಟ್ಟೆಯನ್ನು ಇಡುವಂತಹ ರವಿಕೆಯನ್ನು ಧರಿಸುತ್ತಿದ್ದರೆ ಅದು ಸ್ವಲ್ಪ ಸಡಿಲವಾಗಿರಲಿ. ಹಾಗೇ ಸ್ಲಿವ್ ಲೆಸ್ ಬ್ಲೌಸ್ ಧರಿಸಲು ಬಯಸುವವರು ಸ್ವಲ್ಪ ಅಗಲವಾದ ಸ್ಟ್ರಾಪ್ ಹೊಂದಿರುವ ರವಿಕೆಯನ್ನು ಆರಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...