Kannada Duniya

ಅನಗತ್ಯ ಕೂದಲನ್ನು ತೆಗೆಯುವ ಕ್ರೀಂ ಚರ್ಮದ ಮೇಲೆ ಯಾವ ಪರಿಣಾಮ ಬೀರುತ್ತದೆ ಗೊತ್ತಾ?

ಮಹಿಳೆಯರು ತಮ್ಮ ದೇಹದಲ್ಲಿರುವ ಅನಗತ್ಯ ಕೂದಲನ್ನು ತೆಗೆಯಲು ಕ್ರೀಂಗಳನ್ನು ಬಳಸುತ್ತಾರೆ. ಯಾಕೆಂದರೆ ಈ ಕೂದಲು ಅವರ ಚರ್ಮದ ಸೌಂದರ್ಯವನ್ನು ಕೆಡಿಸುತ್ತದೆ. ಆದರ ನೀವು ಬಳಸುವಂತಹ ಈ ಕ್ರೀಂಗಳು ಚರ್ಮದ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನ ತಿಳಿಯಿರಿ.

ಕೂದಲನ್ನು ತೆಗೆಯುವ ಕ್ರೀಂನಲ್ಲಿ ರಾಸಾಯನಿಕಗಳು ಅಧಿಕವಾಗಿರುವ ಕಾರಣ ಇದು ಚರ್ಮದ ಪಿಹೆಚ್ ಮಟ್ಟವನ್ನು ಕಡಿಮೆ ಮಾಡುತ್ತದೆ,. ಇದರಿಂದ ಚರ್ಮದಲ್ಲಿ ತುರಿಕೆ, ದದ್ದುಗಳು, ಸುಡುವ ಸಂವೇದನೆಯತಹ ಸಮಸ್ಯೆಗಳು ಕಾಡುತ್ತದೆ. ಅಲ್ಲದೇ ಸೂಕ್ಷ್ಮ ಚರ್ಮವನ್ನು ಹೊಂದಿರುವವರು ಇನ್ನೂ ಹೆಚ್ಚು ಸಮಸ್ಯೆಗಳನ್ನು ಅನುಭವಿಸುತ್ತಾರೆ.

ಈ ಕ್ರೀಂಗಳಲ್ಲಿ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಮತ್ತು ಪೊಟ್ಯಾಶಿಯಂ ಹೈಡ್ರಾಕ್ಸೈಡ್ ನಂತಹ ರಾಸಾಯನಿಕಗಳು ಹೆಚ್ಚಾಗಿರುವ ಕಾರಣ ಇದನ್ನು ಅಂಡರ್ ಆರ್ಮ್ಸ್ ಗೆ ಹಚ್ಚಿದಾಗ ಅದು ಚರ್ಮವನ್ನು ಸುಡುತ್ತದೆ. ಇದರಿಂದ ಚರ್ಮ ಕಪ್ಪಾಗುತ್ತದೆ. ಇದು ಚರ್ಮದ ಅಂದವನ್ನು ಕೆಡಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...