Kannada Duniya

ಅಡುಗೆಗೆ ಬಳಸುವ ಈ ಎಲೆ ನಿಮ್ಮ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆಯಂತೆ…!

ಸಸ್ಯಗಳ ಹೂ ಮತ್ತು ಎಲೆಗಳು ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಅದರಲ್ಲಿ ಕರಿಬೇವನ್ನು ಅಡುಗೆಯ ಪರಿಮಳವನ್ನು ಹೆಚ್ಚಿಸಲು ಬಳಸುತ್ತಾರೆ. ಅಲ್ಲದೇ ಇದು ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆಯಂತೆ. ಹಾಗಾದ್ರೆ ಅದನ್ನು ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ನಿಮ್ಮ ಮುಖದಲ್ಲಿರುವ ಸುಕ್ಕುಗಳನ್ನು ನಿವಾರಿಸಲು ಕರಿಬೇವಿನ ಎಲೆಗಳನ್ನು ಪುಡಿ ಮಾಡಿ ಅದರಲ್ಲಿ ಮುಲ್ತಾನಿ ಮಿಟ್ಟಿಯನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ.

ಕರಿಬೇವು ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾಗಿ ಇದು ಮೊಡವೆಗಳ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಆದಕಾರಣ ಕರಿಬೇವಿನ ಪುಡಿಗೆ ಅರ್ಧ ಚಮಚ ಅರಿಶಿನ, ರೋಸ್ ವಾಟರ್ ಅನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ತೊಳೆಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...