Kannada Duniya

Travel:ಒಂಟಿ ಮಹಿಳಾ ಪ್ರವಾಸಿಗರಿಗೆ ಬೆಸ್ಟ್ ಪ್ಲೇಸ್

ಮಹಿಳೆಯರು ಪುರುಷರಿಗಿಂತ ಕಡಿಮೆಯೇನಿಲ್ಲ. ಸ್ವತಂತ್ರವಾಗಿ ಬದುಕುವ ಕಲೆ ಅವರಿಗೆ ಗೊತ್ತು. ಆದ್ರೆ ಏಕಾಂಗಿಯಾಗಿ ಪ್ರವಾಸ ಮಾಡುವುದು ಸುಲಭವಲ್ಲ. ಅತ್ಯಾಚಾರ, ಕಿರುಕುಳ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇವೆ. ಆದ್ರೆ ಭಾರತದ ಕೆಲ ಪ್ರದೇಶಗಳನ್ನು ಯಾವುದೇ ಭಯವಿಲ್ಲದೆ ಒಂಟಿ ಮಹಿಳೆ ಸುತ್ತಾಡಿಕೊಂಡು ಬರಬಹುದು. ಸುಂದರ, ಶಾಂತವಾಗಿರುವ ಈ ಪ್ರದೇಶಗಳು ಮಹಿಳೆಯರಿಗೆ ಸುರಕ್ಷಿತ.

ಲಡಾಕ್ : ಈ ಸ್ಥಳ ಎಷ್ಟು ಸುಂದರವಾಗಿದೆಯೋ ಅಷ್ಟೇ ಶಾಂತವಾಗಿದೆ. ಹಾಗೆ ಸುರಕ್ಷಿತ ಕೂಡ. ಸಾಮಾನ್ಯವಾಗಿ ವಿದೇಶಿ ಮಹಿಳೆಯರು ಏಕಾಂಗಿಯಾಗಿ ಇಲ್ಲಿಗೆ ಬರ್ತಾರೆ. ಪರ್ವತಗಳ ಮಡಿಲಲ್ಲಿರುವ ಈ ಪ್ರದೇಶವನ್ನು ನೋಡಲು ಪ್ರವಾಸಿಗರು ಬೈಕ್ ನಲ್ಲಿ ಬರ್ತಾರೆ. ಇಲ್ಲಿನ ಜನರು ಶಾಂತ ಸ್ವಭಾವದವರು. ಹಾಗೆ ಮಹಿಳೆಯರಿಗೆ ಗೌರವ ನೀಡುತ್ತಾರೆ.

ಉದಯ್ಪುರ : ರಾಜಸ್ತಾನದ ಉದಯ್ಪುರದಲ್ಲಿ ಯಾವುದೇ ಭಯವಿಲ್ಲದೆ ಸುತ್ತಾಡಬಹುದು. ಸುಂದರ ಸರೋವರ, ಭವ್ಯ ಅರಮನೆಗಳನ್ನು ನೋಡಲು ದೂರದೂರುಗಳಿಂದ ಜನರು ಇಲ್ಲಿಗೆ ಬರ್ತಾರೆ. ಹನಿಮೂನ್ ಗೆ ಹೇಳಿ ಮಾಡಿಸಿದ ಸ್ಥಳ ಇದು.

ಉತ್ತರಖಂಡ್ : ಉತ್ತರ ಭಾರತದ ಉತ್ತರಖಂಡ್ ಬಹಳ ಸುಂದರ ಹಾಗೂ ಶಾಂತ ಪ್ರದೇಶ. ಇಲ್ಲಿನ ಜನರು ಸಹಾನುಭೂತಿಯುಳ್ಳವರು. ಸಹಾಯ ಮಾಡಲು ಯಾವಾಗ್ಲೂ ಇಲ್ಲಿನ ಜನರು ಸಿದ್ಧರಿರ್ತಾರೆ. ಒಂಟಿಯಾಗಿ ಮಹಿಳೆ ಅಥವಾ ಹುಡುಗಿ ಇಲ್ಲಿ ಯಾರ ಭಯವಿಲ್ಲದೆ ಸುತ್ತಾಡಬಹುದು.

Travel: ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳುವವರು ಈ ಸಲಹೆ ಪಾಲಿಸಿ

ಮೈಸೂರು : ಕರ್ನಾಟಕದ ಜನರಿಗೆ ಈ ಪ್ರದೇಶದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ತಾಯಿ ಚಾಮುಂಡಿ ನೆಲೆಸಿರುವ ಅರಮನೆ ನಗರಿ ಮೈಸೂರು ಪ್ರವಾಸಿಗರಿಗೆ ಸುರಕ್ಷಿತ ಸ್ಥಳ. ಸಾಮಾನ್ಯವಾಗಿ ಇಲ್ಲಿ ವಿದೇಶಿ ಮಹಿಳೆಯರ ದಂಡೇ ಇರುತ್ತದೆ.

ಸಿಕ್ಕಿಂ : ಸಿಕ್ಕಿಂ ಬಹಳ ಸುಂದರ ಹಾಗೂ ಸ್ವಚ್ಛ ಪ್ರದೇಶ. ಎತ್ತರದ ಬೆಟ್ಟ, ಕಣಿವೆಗಳು ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಇಲ್ಲಿ ಮಹಿಳೆಯರು ಏಕಾಂಗಿಯಾಗಿ ಸುತ್ತಾಡಬಹುದು.

ಶಿಮ್ಲಾ : ಜನರ ಅಚ್ಚುಮೆಚ್ಚಿನ ಪ್ರವಾಸಿ ತಾಣಗಳಲ್ಲಿ ಶಿಮ್ಲಾ ಕೂಡ ಒಂದು. ಎಲ್ಲ ಋತುವಿನಲ್ಲಿಯೂ ಇಲ್ಲಿ ಪ್ರವಾಸಿಗರಿರ್ತಾರೆ. ಇಲ್ಲಿ ಮಹಿಳೆಯರು ಒಂಟಿಯಾಗಿ ಸುತ್ತಾಡಬಹುದಾಗಿದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...