Kannada Duniya

ನೀವು ಕ್ರೂಸ್ ಟ್ರಿಪ್ ಹೋಗಲು ಬಯಸುತ್ತಿದ್ದರೆ ಈ ಸಲಹೆ ಪಾಲಿಸಿ….!

 

ಕ್ರೂಸ್ ಟ್ರಿಪ್ ತುಂಬಾ ಮಜಾವನ್ನು ನೀಡುತ್ತದೆ. ಈ ಟ್ರಪ್ ತುಂಬಾ ಸ್ಮರಣೀಯವಾಗಿರುತ್ತದೆ. ಹಾಗಾಗಿ ಕೆಲವರು ಕ್ರೂಸ್ ಟ್ರಿಪ್ ಗೆ ಹೋಗುತ್ತಾರೆ. ನೀವು ಕೂಡ ಕ್ರೂಸ್ ಟ್ರಿಪ್ ಗೆ ಹೋಗಲು ಬಯಸಿದ್ದರೆ ನೀವು ಕೆಲವು ಸಲಹೆಗಳನ್ನು ಪಾಲಿಸಿ.

ನೀವು ಕ್ರೂಸ್ ಟ್ರಿಪ್ ಹೋಗಲು ಬಯಸಿದ್ದರೆ, ನೀವು ಎಲ್ಲಿಗೆ ಪ್ರಯಾಣ ಮಾಡಬೇಕು ಎಂಬುದನ್ನು ತಿಳಿಯಿರಿ. ಗೋವಾ, ಮುಂಬೈ, ದಕ್ಷಿಣ ಮತ್ತು ಪಶ್ಚಿಮ ಕರಾವಳಿಯಲ್ಲಿ ಹಲವಾರು ಕ್ರೂಸ್ ಟ್ರಿಪ್ ಗಳಿವೆ. ಹಾಗೇ ಕ್ರೂಸ್ ಟ್ರಿಪ್ ಹೋಗಲು ಉತ್ತಮ ಸಮಯವನ್ನು ಆಯ್ಕೆ ಮಾಡಿ.

ಕೆಲವರು 3 ದಿನಗಳ ಕ್ರೂಸ್ ಟ್ರಿಪ್ ಗಳನ್ನು ಬುಕ್ ಮಾಡುತ್ತಾರೆ. ಆದರೆ ನೀವು ದಿನಗಳ ಕ್ರೂಸ್ ಟ್ರಿಪ್ ಹೋದರೆ ಅದರಿಂದ ಹೆಚ್ಚು ಆನಂದವನ್ನು ಪಡೆಯಬಹುದು. ಇದು ಹೆಚ್ಚು ಅನುಭವವನ್ನು ನೀಡುತ್ತದೆ.

ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣವನ್ನು ತಿಳಿದುಕೊಳ್ಳಿ….!

ಹಾಗೇ ನೀವು ಕ್ರೂಸ್ ಟ್ರಿಪ್ ಹೋಗುವಾಗ ಕಿಟಕಿ ಇಲ್ಲದ ಕ್ಯಾಬಿನ್ ಗಳನ್ನು ಬುಕ್ ಮಾಡಬೇಡಿ. ಹಾಗೇ ಮಧ್ಯದಲ್ಲಿರುವ ಹೆಚ್ಚಿನ ಕ್ಯಾಬಿನ್ ಗಳಲ್ಲಿ ಕಿಟಕಿಗಳಿರುವುದಿಲ್ಲ ಎಂಬುದನ್ನು ತಿಳಿದುಕೊಂಡಿರಿ. ಕ್ಯಾಬಿನ್ ಗಳನ್ನು ಸ್ವಲ್ಪ ತಂಪಾಗಿಡಲು ಪ್ರಯತ್ನಿಸಿ.

ಹಾಗೇ ಕ್ರೂಸ್ ಟ್ರಿಪ್ ಗೆ ಹೋಗುವಾಗ ಕಾಂಪ್ಯಾಕ್ಟ್ ಟ್ರಾಲಿ ಬ್ಯಾಗ್ ಗಳನ್ನು ಇರಿಸಿಕೊಳ್ಳಿ. ಅನೇಕ ಕ್ರೂಸ್ ಗಳಲ್ಲಿ ಥೀಮ್ ಡ್ರೆಸ್ ಇದ್ದರೆ ಅದರ ಬಗ್ಗೆ ತಿಳಿದುಕೊಂಡು ಅದನ್ನೇ ಪ್ಯಾಕ್ ಮಾಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...