Kannada Duniya

ಕಾಡುವ ವಾಂತಿಯ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ ಪ್ರಯಾಣಿಸುವ ವೇಳೆ…!

ಕೆಲವರಿಗೆ ಹೆಚ್ಚು ದೂರ ಪ್ರಯಾಣ ಮಾಡಿದರೆ ವಾಂತಿಯಾಗುತ್ತದೆ. ಇದರಿಂದ ಪ್ರಯಾಣ ಮಾಡುವಾಗ ತುಂಬಾ ಕಿರಿಕಿರಿ ಉಂಟಾಗುತ್ತದೆ. ಹಾಗಾಗಿ ಅಂತವರು ಹೆಚ್ಚು ದೂರ ಪ್ರಯಾಣಿಸಲು ಹೆದರುತ್ತಾರೆ. ಹಾಗಾಗಿ ಅಂತವರು ದೂರ ಪ್ರಯಾಣಿಸುವಾಗ ಈ ಸಲಹೆಗಳನ್ನು ಪಾಲಿಸಿದರೆ ವಾಂತಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

-ಶುಂಠಿಯನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಇದು ಔಷಧೀಯ ಗುಣಗಳನ್ನು ಹೊಂದಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರ ವಾಸನೆ ಮನಸ್ಸಿಗೆ ಹಿತವೆನಿಸುತ್ತದೆ. ಹಾಗಾಗಿ ಪ್ರಯಾಣ ಮಾಡುವಾಗ ಶುಂಠಿಯನ್ನು ಅಗೆಯಿರಿ.

ಪ್ರವಾಸದ ಪ್ಲಾನ್ ನಲ್ಲಿದ್ರೆ ಇದನ್ನೊಮ್ಮೆ ಓದಿ

-ಲವಂಗದಲ್ಲಿ ಔಷಧೀಯ ಗುಣಗಳಿವೆ. ಇದರಲ್ಲಿ ವಿಟಮಿನ್ ಎ, ಡಿ, ಇ, ಸಿ, ಫೋಲೇಟ್, ಒಮೆಗಾ 3 , ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾಗಿ ಲವಂಗವನ್ನು ಪ್ರಯಾಣ ಮಾಡುವಾಗ ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ. ಪ್ರಯಾಣದ ಮಧ್ಯದಲ್ಲಿ ವಾಕರಿಕೆ ಬಂದರೆ ಬಾಯಿಗೆ ಹಾಕಿಕೊಂಡು ಅಗೆಯಿರಿ.

-ಪ್ರಯಾಣ ಮಾಡುವಾಗ ವಾಂತಿ ಮತ್ತು ತಲೆತಿರುಗುವಿಕೆಯನ್ನು ತಡೆಗಟ್ಟಲು ನಿಂಬೆ ಹಣ್ಣ ನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ. ವಾಕರಿಕೆ, ತಲೆ ಸುತ್ತು ಬಂದಾಗ ನಿಂಬೆ ರಸವನ್ನು ಸೇವಿಸಿ. ಆಗ ವಾಕರಿಕೆ ದೂರವಾಗುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...