Kannada Duniya

ಬೇಸಿಗೆಯಲ್ಲಿ ಶವರ್ ಜೆಲ್ ಖರೀದಿಸುವಾಗ ಈ ಪದಾರ್ಥಗಳಿವೆಯೇ ಎಂಬುದನ್ನು ಪರೀಕ್ಷಿಸಿ

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸ್ನಾನ ಮಾಡಲು ಸೋಪ್ ಬದಲಿಗೆ ಶವರ್ ಜೆಲ್ ಅನ್ನು ಬಳಸುತ್ತಾರೆ. ಇದು ಚರ್ಮವನ್ನು ಶುದ್ಧೀಕರಿಸಿ, ಕೋಮಲವಾಗಿಸುತ್ತದೆ. ಆದರೆ ಶವರ್ ಜೆಲ್ ಖರೀದಿಸುವಾಗ ಚರ್ಮದ ಆರೋಗ್ಯವನ್ನು ಕಾಪಾಡುವಂತಹ ಈ ಪದಾರ್ಥಗಳಿವೆ ಎಂಬುದನ್ನು ಪರೀಕ್ಷಿಸಿ.

ಹೊಳೆಯುವ ತ್ವಚೆ ಪಡೆಯಲು ರಾತ್ರಿ ಇವುಗಳಲ್ಲಿ ಯಾವುದಾದರೂ ಒಂದನ್ನು ಮುಖಕ್ಕೆ ಹಚ್ಚಿ

*ಅಲೋವೆರಾ ಜೆಲ್ : ಬೇಸಿಗೆಯಲ್ಲಿ ಅಲೋವೆರಾ ಜೆಲ್ ಚರ್ಮಕ್ಕೆ ಅತ್ಯುತ್ತಮವಾಗಿದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುವುದರಿಂದ ಚರ್ಮದ ತುರಿಕೆ ಮತ್ತು ಉರಿಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಶವರ್ ಜೆಲ್ ನಲ್ಲಿ ಅಲೋವೆರಾ ಜೆಲ್ ಇದ್ದರೆ ಉತ್ತಮ.

*ಟೀ ಟ್ರೀ ಆಯಿಲ್ : ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುವುದರಿಂದ ಇದು ಚರ್ಮದ ಮೇಲೆ ಮೂಡುವ ಗುಳ್ಳೆಗಳು ಮತ್ತು ಅಲರ್ಜಿಯನ್ನು ಹೋಗಲಾಡಿಸುತ್ತದೆ. ಹಾಗಾಗಿ ಶವರ್ ಜೆಲ್ ನಲ್ಲಿ ಇದು ಇರುವುದು ಅವಶ್ಯಕ.

ಹೊಳೆಯುವ ತ್ವಚೆ ಪಡೆಯಲು ಕಡಲೆ ಹಿಟ್ಟು ಹೀಗೆ ಬಳಸಿ

*ಸೌತೆಕಾಯಿ : ಇದು ಚರ್ಮವನ್ನು ತಂಪಾಗಿಸಿ, ಮೃದುವಾಗಿಸುತ್ತದೆ. ಇದರಲ್ಲಿ ಹಲವು ಬಗೆಯ ವಿಟಮಿನ್ ಗಳು, ಪೋಷಕಾಂಶಗಳಿರುವುದರಿಂದ ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಇದು ಚರ್ಮದಲ್ಲಿರುವ ಸನ್ ಟ್ಯಾನ್ ಅನ್ನು ನಿವಾರಿಸುತ್ತದೆ.

*ಆವಕಾಡೊ : ಇದರಲ್ಲಿ ಒಮೆಗಾ 3, ವಿಟಮಿನ್ ಗಳು ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳು ಅಧಿಕವಾಗಿದೆ. ಇದು ಚರ್ಮದ ತೇವಾಂಶವನ್ನು ಕಾಪಾಡಿ, ವಯಸ್ಸಾದ ಚಿಹ್ನೆಗಳು ದೂರವಾಗಿಸುತ್ತದೆ. ಇದು ಕಲೆರಹಿತ ಚರ್ಮವನ್ನು ನೀಡುತ್ತದೆ.

Before buying shower gels in summer,look for these ingredients as they improve skin as you bathe.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...