Kannada Duniya

ಲೈಂಗಿಕತೆಯ ವೇಳೆ ಈ ನೈಸರ್ಗಿಕ ಪದಾರ್ಥಗಳನ್ನು ಲೂಬ್ರಿಕಂಟ್ ಆಗಿ ಬಳಸಬೇಡಿ

ಲೈಂಗಿಕತೆಯ ವೇಳೆ ಯೋನಿಯಿಂದ ನೈಸರ್ಗಿಕ ಲೂಬ್ರಿಕಂಟ್ ಬಿಡುಗಡೆಯಾಗುತ್ತದೆ. ಇದು ಯೋನಿಯನ್ನು ನಯಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಉರಿ, ನೋವಿನ ಸಮಸ್ಯೆ ಕಾಡುವುದಿಲ್ಲ. ಆದರೆ ಕೆಲವರಿಗೆ ಲೂಬ್ರಿಕಂಟ್ ಬಿಡುಗಡೆಯಾಗದ ಕಾರಣ ಅದಕ್ಕಾಗಿ ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸುತ್ತಾರೆ. ಅಪ್ಪಿತಪ್ಪಿಯೂ ಇವುಗಳನ್ನು ಬಳಸಬೇಡಿ.

ಲೈಂಗಿಕತೆಯ ವೇಳೆ ಲೂಬ್ರಿಕಂಟ್ ಆಗಿ ಪೆಟ್ರೋಲಿಯಂ ಜೆಲ್ಲಿಯನ್ನು ಬಳಸಬೇಡಿ. ಇದನ್ನು ಬಳಸುವುದರಿಂದ ಬ್ಯಾಕ್ಟೀರಿಯಾಗಳ ಬೆಳವಣಿಗೆಯ ಅಪಾಯವಿದೆ. ಇದರಿಂದ ಯೋನಿಯಲ್ಲಿ ಸೋಂಕು ಉಂಟಾಗುತ್ತದೆ.

ಕೆಲವರು ಲೂಬ್ರಕಂಟ್ ಆಗಿ ಬಾಡಿ ಲೋಷನ್ ಗಳನ್ನು ಬಳಸುತ್ತಾರೆ. ಇದು ಸುಗಂಧ ದ್ರವ್ಯಗಳನ್ನು ಹೊಂದಿರುವ ಕಾರಣ ಇದು ಯೋನಿಯ ಸೂಕ್ಷ್ಮ ತ್ವಚೆಯನ್ನು ಹಾನಿಗೊಳಿಸಬಹುದು.

ಹಾಗೇ ಕೆಲವರು ಆಲಿವ್ ಆಯಿಲ್ ಬಳಸುತ್ತಾರೆ. ಇದನ್ನು ಬಳಸುವುದರಿಂದ ಇದರಲ್ಲಿರುವ ಅಂಶ ಕಾಂಡೋಮ್ ಅನ್ನು ನಿಷ್ಪ್ರೋಜಕಗೊಳಿಸಬಹುದು. ಇದರಿಂದ ಅನಗತ್ಯ ಗರ್ಭ ಧರಿಸುವಂತಾಗುತ್ತದೆ.

ಹಾಗೇ ಲೈಂಗಿಕತೆಯ ವೇಳೆ ಸೋಪ್, ಫೇಸ್ ವಾಶ್, ಹ್ಯಾಂಡ್ ವಾಶ್ ಮುಂತಾದವುಗಳನ್ನು ಬಳಸಬೇಡಿ. ಇದು ಯೋನಿಯನ್ನು ಹಾನಿಗೊಳಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...