Kannada Duniya

ಸಂತೋಷಕ್ಕಾಗಿ ಮೆದುಳಿಗೆ ತರಬೇತಿ ಕೊಡುವುದು ಹೇಗೆ ಗೊತ್ತಾ…?

ಸಂತೋಷವು ಆರೋಗ್ಯಕರ ಜೀವನಕ್ಕೆ ತಳಹದಿ. ಎಲ್ಲಾ ನಕಾರಾತ್ಮಕ ಚಿಂತನೆಗಳನ್ನು ಬಿಟ್ಟರೆ, ನಾವು ಶಾಂತಿಯುತ ಜೀವನವನ್ನು ಆನಂದಿಸಬಹುದು. ಎಲ್ಲಾ ಧನಾತ್ಮಕ ವಿಷಯಗಳ ಮೇಲೆ ಗಮನಹರಿಸಲು ಮೆದುಳಿಗೆ ತರಬೇತಿ ನೀಡಬಹುದು. ಇದಕ್ಕಾಗಿ ಹೆಚ್ಚು ಕಷ್ಟ ಪಡಬೇಕಿಲ್ಲ. ನಮ್ಮ ಜೀವನದಲ್ಲಿ ಪ್ರತಿಯೊಂದು ಸಂಗತಿಯಲ್ಲೂ ಒಳ್ಳೆಯದನ್ನು ಹುಡುಕಬೇಕು. ಅಲ್ಲದೆ, ಸಾಧ್ಯವಾದಷ್ಟು ಭವಿಷ್ಯದ ಬಗ್ಗೆ ಆಶಾವಾದಿಯಾಗಿರಬೇಕು.

ಧನಾತ್ಮಕ ಮನೋವಿಜ್ಞಾನವು ನಮ್ಮ ಆಂತರಿಕ ಶಕ್ತಿ, ಸಂತೋಷ ಮತ್ತು ಆರೋಗ್ಯವನ್ನು ಉತ್ತೇಜಿಸುವ ಗುಣಲಕ್ಷಣಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ವ್ಯಾಯಾಮ, ನಗುವುದು, ಬಾಂಧವ್ಯ, ಸಾಮಾಜಿಕ ಸಂಪರ್ಕಗಳನ್ನು ಹೊಂದುವುದು, ಪ್ರೀತಿಸುವುದು ಮತ್ತು ಕಾಳಜಿ ವಹಿಸುವುದು ಇವೆಲ್ಲವೂ ಮೆದುಳಿನಲ್ಲಿ ಎಂಡಾರ್ಫಿನ್ ಬಿಡುಗಡೆಯನ್ನು ಹೆಚ್ಚಿಸುವ ಚಟುವಟಿಕೆಗಳಾಗಿವೆ. ಅವು ಸಂತೋಷವನ್ನು ಉತ್ತೇಜಿಸುತ್ತದೆ.

ಜೀವನದಲ್ಲಿ ಆಶಾವಾದದ ದೃಷ್ಟಿಕೋನವನ್ನು ಹೊಂದಿರುವುದು, ಸಂತೋಷವಾಗಿರುವುದು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ನೆನಪಿನ ಶಕ್ತಿಯನ್ನು ತಡೆಯುತ್ತದೆ, ಆರೋಗ್ಯಕರ ಆಹಾರವನ್ನು ಉತ್ತೇಜಿಸುತ್ತದೆ, ಸ್ಥೂಲಕಾಯತೆ ಮತ್ತು ದೀರ್ಘಕಾಲದ ನೋವು ಮತ್ತು ಸಂಧಿವಾತದ ಸಮಸ್ಯೆಗಳನ್ನು ತಡೆಯುತ್ತದೆ.

Brain Stroke risk: ಸ್ನಾನ ಮಾಡುವಾಗ ಈ ತಪ್ಪನ್ನು ಮಾಡಿದರೆ ನೀವು ಬ್ರೈನ್ ಸ್ಟ್ರೋಕ್ ಗೆ ಬಲಿಯಾಗಬಹುದು..ಎಚ್ಚರ…!

ಸಂತೋಷವು ಸಮಸ್ಯೆ-ಪರಿಹರಿಸುವ ವಿಧಾನವನ್ನು ಉತ್ತೇಜಿಸುತ್ತದೆ, ಗುರಿಗಳನ್ನು ಪೂರ್ಣಗೊಳಿಸಲು ಪ್ರೇರಣೆಯನ್ನು ನೀಡುತ್ತದೆ, ಸಮಾನ ಮನಸ್ಸಿನ ಜನರೊಂದಿಗೆ ಸಂಪರ್ಕ ಸಾಧಿಸಲು ನೆರವಾಗುತ್ತದೆ. ಹಾಗಿದ್ದರೆ ತಡ ಏಕೆ, ನಿಮ್ಮ ಮೆದುಳಿಗೆ ತರಬೇತಿ ನೀಡಿ, ದೀರ್ಘಾವಧಿಯ ಆರೋಗ್ಯಕರ ಜೀವನಕ್ಕೆ ಸಿದ್ಧರಾಗಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...