Kannada Duniya

ಮಗನಿಗೆ ಹೆಣ್ಣು ಹುಡುಕುತ್ತಿದ್ದಿರಾ…? ಹಾಗಾದ್ರೆ ಇದನ್ನು ತಪ್ಪದೇ ಓದಿ!

ಪ್ರತಿಯೊಬ್ಬ ತಂದೆ ತಾಯಿಯೂ ಮಗನಿಗೆ ಹೆಣ್ಣು ಹುಡುಕುವ ಸಂದರ್ಭದಲ್ಲಿ ಈ ವಿಷಯವನ್ನು ನೆನಪಿನಲ್ಲಿ ಇಟ್ಟುಕೊಂಡರೆ ನಿಮಗೆ ಬೆಸ್ಟ್ ಸೊಸೆ ಸಿಗುವುದು ನಿಶ್ಚಿತ.

ಅತ್ತೆಯಾದವಳಿಗೆ ತನ್ನ ಸೊಸೆ ಮನೆಯ ಜವಾಬ್ದಾರಿಗಳನ್ನು ತನ್ನಂತೆ ನಿಭಾಯಿಸುತ್ತಾಳೆ ಎಂಬ ಕನಸು ಇರುತ್ತದೆ. ಬಂದ ಬಳಿಕ ಸೊಸೆ ಸರಿಯಿಲ್ಲ ಎಂದು ದೂರುವ ಬದಲು ಸರಿಯಾದ ಸೊಸೆಯನ್ನು ಆಯ್ಕೆ ಮಾಡುವುದು ಹೇಗೆ?

ಮೊದಲಿಗೆ ನಿಮ್ಮ ಮಗನಿಗೆ ಕನ್ಯೆಯ ಹುಡುಕಾಟದಲ್ಲಿದ್ದರೆ ನೀವು ಆಕೆಯ ತಾಯಿಯನ್ನು ನೋಡಬೇಕಂತೆ. ಹೆಚ್ಚಿನ ಸಂದರ್ಭಗಳಲ್ಲಿ ತಾಯಿಯಂತೆ ಮಗಳು ಇರುವ ಕಾರಣ ಅವರ ಗುಣ-ಅವಗುಣಗಳನ್ನು ಮೊದಲು ಪರೀಕ್ಷಿಸಿಕೊಳ್ಳಿ.

ಸುಸಂಸ್ಕೃತ ಮನೆತನದ ಹೆಣ್ಣುಮಗಳು ಅದನ್ನೇ ಕಲಿತಿರುತ್ತಾಳೆ. ಆಕೆಯ ಅಂದ ಚಂದ ನೋಡಿ ಮರುಳಾಗುವ ಬದಲು ಆಕೆಯ ಮನೆಯ ಹಿರಿಯರೊಂದಿಗೆ ಹಾಗೂ ಕಿರಿಯರೊಂದಿಗೆ ಹೇಗೆ ನಡೆದುಕೊಳ್ಳುತ್ತಾಳೆ ಎಂಬುದನ್ನು ತಿಳಿಯಿರಿ.

ಮುಗ್ಧ ಹುಡುಗಿಯನ್ನು ಆಯ್ಕೆ ಮಾಡಿದೆ ಎಂದು ಹೆಮ್ಮೆ ಪಡುವ ಬದಲು ವಿದ್ಯಾವಂತ ತಿಳುವಳಿಕೆಯುಳ್ಳ, ಪ್ರಾಪಂಚಿಕ ಆಗುಹೋಗುಗಳ ಬಗ್ಗೆ ಅರಿವಿರುವ ಸೊಸೆಯನ್ನು ಆಯ್ಕೆ ಮಾಡಿ. ಈಕೆಯೇ ನಿಮ್ಮ ಮನೆಗೆ ಸರಿಯಾಗಿ ಹೊಂದಿಕೊಳ್ಳುತ್ತಾಳೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...