Kannada Duniya

ನಿಮಗಾಗಿ ನೀವು ಸಮಯ ನೀಡಿ… ಮನಸ್ಸು ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಿ…!

ಗಂಡ, ಮಕ್ಕಳು, ಆಫೀಸ್ ಕೆಲಸ, ಮನೆ ನೋಡಿಕೊಳ್ಳುವುದು ಹೀಗೆ ಎಲ್ಲವನ್ನೂ ನಿಭಾಯಿಸುವಾಗ ನಿಮ್ಮ ಆಸಕ್ತಿಯನ್ನು ಮರೆಯಬೇಡಿ. ಇದರಿಂದ ಜೀವನ ಒಂದು ರೀತಿ ಬೋರು ಅನಿಸುವುದಕ್ಕೆ ಶುರುವಾಗುತ್ತದೆ.
ಸಾಧ್ಯವಾದಷ್ಟು ಮನೆ ಕೆಲಸಗಳನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಟ್ರೈ ಮಾಡಿ. ಸಿಕ್ಕ ಸಮಯದಲ್ಲಿ ನಿಮ್ಮ ಆಸಕ್ತಿಯ ವಿಷಯಗಳತ್ತ ಗಮನನೀಡಿ. ಇದರಿಂದ ನಿಮ್ಮ ಮನಸ್ಸು ಪ್ರಶಾಂತವಾಗುತ್ತದೆ.

ಇನ್ನು ಎಲ್ಲವನ್ನು ನಾನೇ ಮಾಡಿಕೊಳ್ಳುತ್ತೇನೆ ಎಂದು ಮುಂದಾಗಬೇಡಿ. ಸಾಧ್ಯವಾದಷ್ಟು ಮನೆಕೆಲಸದಲ್ಲಿ ಮನೆಯವರ ಸಹಾಯ ಪಡೆದುಕೊಳ್ಳಿ.

ವಾರಕ್ಕೊಮ್ಮೆ/ತಿಂಗಳಿಗೊಮ್ಮೆ ನಿಮ್ಮ ಮುಖ, ಕಾಲುಗಳ ಆರೈಕೆ ಮಾಡಿಕೊಳ್ಳಿ. ಸಾಧ್ಯವಾದರೆ ಪಾರ್ಲರ್ ಗೆ ಹೋಗಿ. ಇಲ್ಲವಾದರೆ ಮನೆಯಲ್ಲಿಯೇ ಟ್ರೈ ಮಾಡಿ.

ಮಕ್ಕಳ ಲಂಚ್ ಬಾಕ್ಸ್ ಗೆ ಮಾಡಿಕೊಡಿ ಪನ್ನೀರ್ ಚಪಾತಿ ರೋಲ್….!

ಇನ್ನು ನಿಮಗೆ ಸಿನಿಮಾ ನೋಡುವ, ಚಾರಣಕ್ಕೆ ಹೋಗುವ ಆಸಕ್ತಿ ಇದ್ದರೆ ಮಕ್ಕಳಿಗೆ ರಜೆ ಇರುವಾಗ ಟ್ರೈ ಮಾಡಿ. ಇದರಿಂದ ನಿಮ್ಮ ಮನಸ್ಸು ಕೂಡ ಖುಷಿಯಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...