Kannada Duniya

ತಾಯಿ ಮಗಳ ಸಂಬಂಧ ಗಟ್ಟಿಯಾಗಲು ಈ ಕೆಲಸ ಮಾಡಿ…!

ತಾಯಂದಿರು ತಮ್ಮ ಹೆಣ್ಣು ಮಕ್ಕಳೊಂದಿಗೆ ವಿಭಿನ್ನ ಸಂಬಂಧವನ್ನು ಹೊಂದಿರುತ್ತಾರೆ. ಮಗಳ ಬಾಲ್ಯದಿಂದಲೂ ಜೀವನದ ಪ್ರತಿ ಹಂತದಲ್ಲೂ ತಾಯಿ ತನ್ನ ಕನಸುಗಳನ್ನು ಬದಿಗೊತ್ತಿ ಮಗಳಿಗಾಗಿ ಬದುಕುತ್ತಾಳೆ. ತಾಯಿ ಮಗಳನ್ನು ನೋಡಿಕೊಳ್ಳುವುದು ಮಾತ್ರವಲ್ಲ ಸರಿತಪ್ಪುಗಳನ್ನು ಕಲಿಸುತ್ತಾರೆ. ಹಾಗಾಗಿ ಈ ತಾಯಿ ಮಗಳ ಸಂಬಂಧ ಯಾವಾಗಲೂ ಗಟ್ಟಿಯಾಗಿರಲು ಈ ಸಲಹೆಗಳನ್ನು ಪಾಲಿಸಿ.

ಮಗಳು ದೊಡ್ಡವರಾದಾಗ ತನ್ನ ಸುರಕ್ಷತೆಯ ಜವಾಬ್ದಾರಿಯನ್ನು ತಾನೇ ಅನುಭವಿಸುವಂತೆ ಮಾಡಿ. ಯಾಕೆಂದರೆ ಮಗಳು ಚಿಕ್ಕವಳಿದ್ದಾಗ ತಂದೆ ತಾಯಿ ಸಹೋದರರ ರಕ್ಷಣೆ ಸಿಗುತ್ತದೆ. ಆದರೆ ದೊಡ್ಡವರಾದ ಮೇಲೆ ಅವರ ಸುರಕ್ಷತೆಯನ್ನು ಅವರೇ ಮಾಡಿಕೊಳ್ಳಬೇಕಾಗುತ್ತದೆ.

ಮಗಳು ಕಾಲೇಜಿಗೆ ಹೋದಾಗ ಅವರಿಗೆ ಸ್ನೇಹಿತರು ಸಿಗುತ್ತಾರೆ. ಆಗ ಅವಳು ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿದರೆ ಒಳ್ಳೆಯದು, ಇಲ್ಲವಾದರೆ ಇದರಿಂದ ಅವರಿಗೆ ಹಾನಿಯಾಗಬಹುದು. ಹಾಗಾಗಿ ಮಗಳಿಗೆ ಉತ್ತಮ ಸ್ನೇಹಿತರನ್ನು ಆರಿಸಿಕೊಳ್ಳುವಂತೆ ಸಲಹೆ ನೀಡಿ.

ಈ ವಿಷಯಗಳು ನಿಮ್ಮ ಸಂಗಾತಿಯ ಮನಸ್ಸಿನಲ್ಲಿ ಹೇಳಲಾಗದ ಅಸಮಾಧಾನವನ್ನು ಉಂಟುಮಾಡಬಹುದು

ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ. ಮಗಳಿಗೆ ತನ್ನ ಬಗ್ಗೆ ಭರವಸೆ ಹುಟ್ಟುವಂತೆ ಮಾಡಿ. ಕಷ್ಟಗಳನ್ನು ಎದುರಿಸುವ ಧೈರ್ಯ ತುಂಬಿ. ಸಮಸ್ಯೆಯನ್ನು ತಾಯೊಂದಿಗೆ ಹಂಚಿಕೊಳ್ಳುವಂತೆ ತಿಳಿಸಿ. ಇದರಿಂದ ಮಗಳು ದುರ್ಬಲಳಾಗುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...