Kannada Duniya

ನಿಮ್ಮಲ್ಲಿ ಪ್ರೀತಿಯ ಭಾವನೆ ಹೆಚ್ಚಾಗಲು ಈ ಕೆಲಸ ಮಾಡಿ

ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಪ್ರೀತಿ ಇರುತ್ತದೆ. ಇದು ಒಂದು ಅದ್ಭುತವಾದ ಭಾವನೆ. ಆದರೆ ಈ ಪ್ರೀತಿಯ ಭಾವನೆ ಮೂಡಲು ನಮ್ಮ ದೇಹದ ಕೆಲವು ಹಾರ್ಮೋನ್ ಗಳು ಕಾರಣವಾಗಿದೆಯಂತೆ. ಹಾಗಾಗಿ ಅದರ ಬಗ್ಗೆ ತಿಳಿದುಕೊಳ್ಳಿ.

ನಿಮ್ಮಲ್ಲಿ ಪ್ರೀತಿಯ ಭಾವನೆ ಹೆಚ್ಚಾಗಲು ಆಕ್ಸಿಟೋಸಿಸ್ ಹಾರ್ಮೋನ್ ಕಾರಣ. ಈ ಹಾರ್ಮೋನ್ ಇತರರ ಮೇಲೆ ನಂಬಿಕೆ ಮತ್ತು ಸಹಕಾರದ ಭಾವನೆ ಮೂಡಲು ಸಹಾಯ ಮಾಡುತ್ತದೆ. ಇದು ಪ್ರಣಯಕ್ಕೆ ಮಾತ್ರವಲ್ಲ ಸ್ನೇಹ ಮತ್ತು ಕೌಟುಂಬಿಕ ಸಂಬಂಧಗಳಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ.

ಹಾಗಾಗಿ ನಿಮ್ಮ ದೇಹದಲ್ಲಿ ಈ ಹಾರ್ಮೋನ್ ಅನ್ನು ಹೆಚ್ಚಿಸಲು ಸಾಕು ಪ್ರಾಣಿಗಳ ಜೊತೆಗೆ ಸಮಯ ಕಳೆಯಿರಿ. ನಿಯಮಿತವಾಗಿ ಧ್ಯಾನ, ಯೋಗ ಮಾಡಿ ಹಾಗೂ ಸಾಕಷ್ಟು ವಿಶ್ರಾಂತಿ ಪಡೆದುಕೊಳ್ಳಿ. ಸ್ನೇಹಿತರು ಮತ್ತು ಕುಟುಂಬದ ಜೊತೆ ಸಮಯ ಕಳೆಯಿರಿ. ಆರೋಗ್ಯಕರ ಆಹಾರ ಸೇವಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...