Kannada Duniya

ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದವನ್ನು ಸೇವಿಸಬೇಡಿ, ಯಾಕೆ ಗೊತ್ತಾ?

ದೇವಾಲಯದಲ್ಲಿ ಪೂಜೆಯ ಬಳಿಕ ಪ್ರಸಾದವನ್ನು ನೀಡಲಾಗುತ್ತದೆ. ಪ್ರಸಾದ ಸೇವನೆಯಿಂದ ನಮ್ಮ ಪಾಪಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಶಿವನ ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದವನ್ನು ತಿನ್ನಬಾರದಂತೆ. ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ.

 

ಶಿವನ ತಲೆಯ ಮೇಲೆ ಚಂಡೇಶ್ವರನೆಂಬ ಗಣವಿದೆಯಂತೆ. ಶಿವಲಿಂಗದ ಮೇಲೆ ಅರ್ಪಿಸಿದ ಪ್ರಸಾದವು ದೆವ್ವ ಮತ್ತು ಆತ್ಮಗಳ ಮುಖ್ಯಸ್ಥನಾದ ಚಂಡೇಶ್ವರನಿಗೆ ಸೇರುತ್ತದೆಯಂತೆ.

 

ಹಾಗಾಗಿ ಇದನ್ನು ಸೇವಿಸಿದರೆ ಅವರ ಜೀವನದಲ್ಲಿ ಸಮಸ್ಯೆಗಳು ಕಾಡುತ್ತದೆಯಂತೆ. ಹಾಗಾಗಿ ಶಿವಲಿಂಗದ ಮೇಲೆ ನೀರನ್ನು ಹಾಕಿ. ಇದರಿಂದ ಪಾಪ ಪರಿಹಾರವಾಗುತ್ತದೆಯಂತೆ.

 

Vidura niti :ವಿದುರ ನೀತಿಯ ಪ್ರಕಾರ, ಇಂತವರ ಮನೆಯಲ್ಲಿ ಯಾವುದೇ ದೇವರ ಆಶೀರ್ವಾದ ಇರುವುದಿಲ್ಲವಂತೆ

ಆದರೆ ಶಿವಲಿಂಗದ ಮೇಲೆ ಅರ್ಪಿಸಿದ ಯಾವುದೇ ಲೋಹದ ವಸ್ತುಗಳನ್ನು ಮಾತ್ರ ಪ್ರಸಾದದ ರೂಪದಲ್ಲಿ ಸ್ವೀಕರಿಸಬಹುದಂತೆ. ಯಾಕೆಂದರೆ ಇವು ಶಿವನಿಗೆ ಅರ್ಪಿತವಾಗುತ್ತವೆಯಂತೆ. ಹಾಗಾಗಿ ಇದನ್ನು ಸ್ವೀಕರಿಸಿದರೆ ಎಲ್ಲಾ ಪಾಪಗಳು ನಾಶವಾಗುತ್ತದೆಯಂತೆ.

 

Learn which Shivling prasad should be accepted and which should not.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...