Kannada Duniya

ತುಳಸಿ ಎಲೆಗಳನ್ನು ಕೀಳುವಾಗ ಈ ನಿಯಮ ಪಾಲಿಸಿ…!

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ಸಸ್ಯವನ್ನು ದೈವಿಕವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇದನ್ನು ದೇವರ ಪೂಜೆಗೂ ಕೂಡ ಬಳಸುತ್ತಾರೆ. ಹಾಗಾಗಿ ಇದರ ಎಲೆಗಳನ್ನು ಯಾವಾಗ ಬೇಕು ಆವಾಗ ಕೀಳುವ ಹಾಗಿಲ್ಲ. ಇದರಿಂದ ನಿನಗೆ ಅಶುಭವಾಗುತ್ತದೆ. ಹಾಗಾಗಿ ತುಳಸಿ ಎಲೆಗಳನ್ನು ಕೀಳುವಾಗ ಈ ನಿಯಮ ಪಾಲಿಸಿ.

-ತುಳಸಿ ಎಲೆಗಳನ್ನು ಕೀಳುವಾಗ ನಿಮ್ಮ ಉಗುರುಗಳನ್ನು ಬಳಸಿ ಕೀಳಬೇಡಿ. ಅದರಬದಲು ನಿಮ್ಮ ಬೆರಳುಗಳನ್ನು ಬಳಸಿ. ಅಥವಾ ಈಗಾಗಲೇ ಬಿದ್ದಿರುವ ಎಲೆಗಳನ್ನು ಬಳಸಬಹುದು.

-ತುಳಸಿ ಎಲೆಗಳನ್ನು ಭಾನುವಾರದಂದು ಕೀಳಬೇಡಿ. ಅಮಾವಾಸ್ಯೆ, ಚತುರ್ದಶಿ ಮತ್ತು ದ್ವಾದಶಿಯಂದು ತುಳಸಿ ಎಲೆಗಳನ್ನು ಕೀಳಬಾರದು. ಇದರಿಂದ ಪಾಪ ಉಂಟಾಗುತ್ತದೆ. ಹಾಗೇ ಭಾನುವಾರ ತುಳಸಿ ಗಿಡಕ್ಕೆ ನೀರು ಹಾಕಬಾರದು.

-ಸಂಜೆಯ ವೇಳೆ ತುಳಸಿ ಎಲೆಗಳನ್ನು ಕೀಳಬಾರದು. ಇದರಿಂದ ತುಳಸಿ ಕೋಪಗೊಳ್ಳುತ್ತಾಳೆ. ಹಾಗೇ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣದ ಸಮಯದಲ್ಲಿ ತುಳಸಿ ಎಲೆಗಳನ್ನು ಕೀಳಬಾರದು.

ತುಳಸಿ ಗಿಡವನ್ನು ಮುಟ್ಟುವ ವೇಳೆ ಈ ಬಗ್ಗೆ ಎಚ್ಚರವಿರಲಿ, ಇಲ್ಲವಾದರೆ ಮಹಾಪಾಪ ಕಾಡುತ್ತೆ

-ಒಣಗಿದ ತುಳಸಿ ಗಿಡಗಳನ್ನು ಮನೆಯ ಮುಂದೆ ಇಟ್ಟುಕೊಳ್ಳಬೇಡಿ. ಇದರಿಂದ ಮನೆಗೆ ಅಶುಭ ಎನ್ನಲಾಗುತ್ತದೆ. ಹಾಗೇ ಪೂಜೆಗೆ ಬಳಸಿದ ತುಳಸಿ ಎಲೆಗಳನ್ನು ಎಲೆಂದರಲ್ಲಿ ಎಸೆಯಬೇಡಿ. ಅದು ಒಣಗಿದ ಬಳಿಕ ಅದನ್ನು ಯಾವುದಾದರೂ ಮರದ ಬುಡಕ್ಕೆ ಹಾಕಿ.

 

Rules for plucking Tulsi leaves


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...