Kannada Duniya

ಕನಸಿನಲ್ಲಿ ಬೋಳು ತಲೆಯ ವ್ಯಕ್ತಿಯನ್ನು ನೋಡುವುದು ಶುಭವೇ? ಅಶುಭವೇ?

ಪ್ರತಿಯೊಬ್ಬರಿಗೂ ನಿದ್ರೆಯಲ್ಲಿ ಕನಸು ಬೀಳುತ್ತದೆ. ಕನಸು ಕಾಣುವುದು ಒಳ್ಳೆಯದು. ಯಾಕೆಂದರೆ ಇದು ನಮ್ಮ ಭವಿಷ್ಯದಲ್ಲಿ ನಡೆಯುವುದರ ಬಗ್ಗೆ ಸೂಚನೆ ನೀಡುತ್ತದೆಯಂತೆ. ಅದರಂತೆ ನಿಮ್ಮ ಕನಸಿನಲ್ಲಿ ಬೋಳು ತಲೆಯ ವ್ಯಕ್ತಿಗಳನ್ನು ನೋಡುವುದು ಶುಭವೇ? ಅಶುಭವೇ? ಎಂಬುದನ್ನು ತಿಳಿಯಿರಿ.

ಕನಸಿನಲ್ಲಿ ನೀವು ಬೋಳು ತಲೆಯ ಮಗುವನ್ನು ಕಂಡರೆ ನಿಮ್ಮ ಆತ್ಮವಿಶ್ವಾಸ ಕಡಿಮೆಯಾಗುತ್ತದೆಯಂತೆ. ಇದರರ್ಥ ನಿಮ್ಮ ಸ್ನೇಹಿತರಲ್ಲಿ ಒಬ್ಬರು ನಿಮಗೆ ದ್ರೋಹ ಮಾಡಲಿದ್ದಾರೆಂದು ತಿಳಿಸುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸಮಸ್ಯೆ ಕಂಡುಬರುತ್ತದೆ ಎಂಬುದನ್ನು ಸೂಚಿಸುತ್ತದೆ.

ಕನಸಿನಲ್ಲಿ ನೀವು ಬೋಳು ತಲೆಯಲ್ಲಿರುವುದು ಕಂಡರೆ ಅದು ಅಶುಭವಂತೆ. ನಿಮ್ಮ ಕುಟುಂಬದಲ್ಲಿ ಕೆಟ್ಟ ಘಟನೆ ನಡೆಯಬಹುದು ಎಂಬುದನ್ನು ತಿಳಿಸುತ್ತದೆಯಂತೆ. ಹಾಗಾಗಿ ಇಂತಹ ಕನಸು ಬಿದ್ದಾಗ ನಿಮ್ಮ ಕುಲದೇವರನ್ನು ಪೂಜೆ ಮಾಡಿ.

ಹಾಗೇ ಕನಸಿನಲ್ಲಿ ಮಹಿಳೆಯ ತಲೆ ಬೋಳಾಗಿರುವುದು ಕಂಡುಬಂದರೆ ಅದು ಶುಭವಂತೆ. ನಿಮ್ಮ ವೈವಾಹಿಕ ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರಿ ಎಂಬುದನ್ನು ತಿಳಿಸುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...